ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆ

ಮಂಗಳೂರು (ದಾವಣಗೆರೆ): ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅವರ ಹಿರಿಯ ಮಗಳ ಗಂಡ ಪ್ರತಾಪ್ ಕುಮಾರ್​ ಕೆ ಜಿ (41ವ) ಜು.8ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದನ್ನು ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್​ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here