ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ – ಆಶೀಶ್ ಆನಂದ್ ಖಂಡಿಗ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು/ಕಡಬ: ಮೇ 2024 ರಲ್ಲಿ ನಡೆದ ಅಖಿಲ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಕಡಬ ತಾಲೂಕು ಚಾರ್ವಕ ಗ್ರಾಮದ ಖಂಡಿಗ ನಿವಾಸಿಯಾಗಿರುವ ಆಶೀಶ್ ಆನಂದ್ ಖಂಡಿಗ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂತ ಜೋಸೆಫ್ ಪ್ರಾಥಮಿಕ ಶಾಲೆ ಸುಳ್ಯ, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಶಾರದಾ ವಿದ್ಯಾಲಯಯದಲ್ಲಿ ಮುಗಿಸಿ ಬೆಂಗಳೂರಿನ ಲೋಹಿತ್ ಅಕಾಡೆಮಿ ಕಾಲೇಜಿನಲ್ಲಿ ಬಿ ಕಾಂ ವಿತ್ ಸಿ ಎ ಕೋರ್ಸ್ ಮಾಡಿ ಬಳಿಕ ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಎನ್.ಸಿ.ಯಸ್. ರಾಘವನ್ ಚಾರ್ಟರ್ಡ್ ಅಕೌಂಟೆಂಟ್ಸ್ ಕಂಪನಿಯಲ್ಲಿ 3 ವರ್ಷಗಳ ತರಬೇತಿ ಮುಗಿಸಿ ಇದೀಗ ಸಿ ಎ ಪದವಿ ಪಡೆದಿರುತ್ತಾರೆ. ಇವರು ಸುಳ್ಯ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ,  ಆನಂದ ಖಂಡಿಗ ಮತ್ತು ಮುಳ್ಯ- ಅಟ್ಲೂರು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ರವರ ಪುತ್ರರಾಗಿರುತ್ತಾರೆ. ಆನಂದ ಖಂಡಿಗ ಪುತ್ತೂರಿನಲ್ಲಿ ಟ್ಯಾಕ್ಸ್‌ ಕನ್ಸಲ್ಟೆಂಟ್ ಕಛೇರಿ ನಡೆಸುತ್ತಿದ್ದಾರೆ. 

LEAVE A REPLY

Please enter your comment!
Please enter your name here