ಮೈಕ್ರೋಸಾಫ್ಟ್ ಸೇವೆಯಲ್ಲಿ ತಾಂತ್ರಿಕ ದೋಷ- ಜಗತ್ತಿನೆಲ್ಲೆಡೆ ಕ್ಲೌಡ್‌ ಸೇವೆಯಲ್ಲಿ ವ್ಯತ್ಯಯ

ಮಂಗಳೂರು/ದೆಹಲಿ: ಮೈಕ್ರೋಸಾಫ್ಟ್ ನ ವಿಂಡೋಸ್ ಮತ್ತು ಸೇವೆಗಳಲ್ಲಾದ ತಾಂತ್ರಿಕ ದೋಷದಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಯಾನ ಮತ್ತಿತರ ಕ್ಷೇತ್ರಗಳ ಸೇವೆಗಳಲ್ಲಿ ವ್ಯತ್ಯಯವಾಗಿದೆ.

ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‌ನಲ್ಲಿ ಬ್ಯಾಂಕ್‌ ಸೇವೆಗಳಿಗೆ ಬಾಧಿತವಾಗಿದ್ದು ಭಾರತದಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳು ಸಮಸ್ಯೆಯನ್ನು ಎದುರಿಸುವಂತಾಗಿದೆ. ದಿಲ್ಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲೂ ಕೆಲ ಸೇವೆಗಳು ಬಾಧಿತವಾಗಿವೆ. ಹಲವು ವಿಮಾನಯಾನ ಸಂಸ್ಥೆಗಳು ಸೇವೆಯಲ್ಲುಂಟಾದ ವ್ಯತ್ಯಯಗಳ ಬಗ್ಗೆ ಹೇಳಿಕೆಗಳನ್ನು ಬಿಡುಗಡೆಗೊಳಿಸಿವೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಕೂಡ ಸಮಸ್ಯೆಗೀಡಾಗಿದೆ. ಬೆಂಗಳೂರು ಮತ್ತು ಮಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದ್ದು, ಮ್ಯಾನುವಲ್‌ ಚೆಕ್‌ ಇನ್‌ ವ್ಯವಸ್ಥೆ ಮಾಡಲಾಗಿತ್ತು. ಐಟಿ ವಲಯದಲ್ಲಿಯೂ ಸಮಸ್ಯೆ ಕಾಡಿದೆ. 

ಜಗತ್ತಿನಾದ್ಯಂತ ಲಕ್ಷಾಂತರ ವಿಂಡೋಸ್ ಬಳಕೆದಾರರ ಪರದೆಗಳಲ್ಲಿ ಬ್ಲೂ ಸ್ಟೀನ್ ಆಫ್ ಡೆತ್ ಕಾಣಿಸಿಕೊಂಡಿದೆ ಹಾಗೂ ಕಂಪ್ಯೂಟರ್‌ಗಳು ಶಡ್ಡೌನ್‌ ಆಗಿ ಮರು ಆರಂಭಗೊಂಡಿವೆ. ಕೆಲವೆಡೆ ಕಂಪ್ಯೂಟರ್‌ಗಳು ಸತತವಾಗಿ ಮರುಆರಂಭಗೊಳ್ಳುತ್ತಿವೆ. ಬ್ಲೂ ಸ್ಟೀನ್ ದೋಷಗಳನ್ನು ಬ್ಲ್ಯಾಕ್ ಸ್ಟೀನ್ ದೋಷಗಳು ಅಥವಾ ಸ್ಟಾಪ್ ಕೋಡ್ ದೋಷಗಳೆಂದು ಕರೆಯಲಾಗುತ್ತದೆ. ಸಮಸ್ಯೆಯನ್ನು ಪರಿಹರಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

LEAVE A REPLY

Please enter your comment!
Please enter your name here