ಗುಜರಾತಿನಲ್ಲಿ ತರಗತಿಯ ಗೋಡೆ ಕುಸಿತ – ಸಿಸಿಟಿವಿ ದೃಶ್ಯ ವೈರಲ್

ಮಂಗಳೂರು/ಅಹಮದಾಬಾದ್: ಗುಜರಾತ್ ನ ಶಾಲೆಯೊಂದರಲ್ಲಿ ಮಕ್ಕಳು ಊಟ ಮಾಡುತ್ತಿದ್ದ ವೇಳೆ ತರಗತಿಯ ಗೋಡೆ ಕುಸಿದು ಬಿದ್ದಿದೆ. ವಡೋದರಾದ ಶ್ರೀ ನಾರಾಯಣ ಗುರುಕುಲಂ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯು ನಗರದ ವಹೋಡಿಯಾ ರಸ್ತೆಯಲ್ಲಿದೆ. ಪ್ರಾಂಶುಪಾಲರ ಪ್ರಕಾರ, ಶುಕ್ರವಾರ(ಜು.19) ಮಧ್ಯಾಹ್ನ 12:30 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಊಟದ ವಿರಾಮದ ವೇಳೆ ದೊಡ್ಡ ಶಬ್ದ ಕೇಳಿ ತರಗತಿಗೆ ತೆರಳಿದೆವು. ಅಪಘಾತದಲ್ಲಿ ಮಗುವಿನ ತಲೆಗೆ ಗಾಯವಾಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಾಂಶುಪಾಲರಾದ ರೂಪಾಲ್ ಶಾ ತಿಳಿಸಿದ್ದಾರೆ. ಮಕ್ಕಳು ಸೈಕಲ್ ನಿಲ್ಲಿಸುವ ಪಾರ್ಕಿಂಗ್ ಸ್ಥಳಕ್ಕೆ ತರಗತಿಯ ಗೋಡೆ ಬಿದ್ದಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿಯೂ ಹೊರಬಿದ್ದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ
https://x.com/i/status/1814495048752681347

LEAVE A REPLY

Please enter your comment!
Please enter your name here