ಬೆಂಕಿಗಾಹುತಿಯಾದ ಮೀನುಗಾರಿಕೆ ಬೋಟ್ – 10 ಮೀನುಗಾರರ ರಕ್ಷಣೆ

ಮಂಗಳೂರು: ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟೊಂದು ಸೋಮವಾರ ಬೆಳಗಿನ ಜಾವ ಸಮುದ್ರ ಮಧ್ಯೆ ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ.

ಹುಸೈನ್ ಎಂಬವರ ಮಾಲಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಇಂದು ಬೆಳಗಿನ ಜಾವ 3ರಿಂದ 4 ಗಂಟೆಯ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ಬೋಟ್ ನಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ಬೋಟ್ ನಲ್ಲಿದ್ದವರು ರಕ್ಷಿಸಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here