ಮಂಗಳೂರು (ನವದೆಹಲಿ): ದೆಹಲಿ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಐಸಿಸ್ ಉಗ್ರನೊಬ್ಬನನ್ನು ಇಂದು ಬೆಳಗಿನ ಜಾವ ದೆಹಲಿ–ಫರಿದಾಬಾದ್ ಗಡಿಯಲ್ಲಿ ಬಂಧಿಸಲಾಗಿದೆ.
ರಿಜ್ವಾನ್ ಅಬ್ದುಲ್ ಹಾಜಿ ಅಲಿ ಎಂಬ ಉಗ್ರನನ್ನು ದೆಹಲಿ ಪೊಲೀಸ್‌ನ ವಿಶೇಷ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಹಾಜಿ ಬಗ್ಗೆ ಸುಳಿವು ಕೊಟ್ಟವರಿಗೆ ಪೊಲೀಸರು 3 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದರು. ಭಾರತದಲ್ಲಿ ಐಸಿಸ್ ಪ್ರೇರಿತ ಭಯೋತ್ಪಾದನೆಯಲ್ಲಿ ತೊಡಗಿದ್ದ ಆರೋಪ ಈತನ ಮೇಲಿತ್ತು. ದೆಹಲಿಯಲ್ಲಿ ದೇಶದ ಪ್ರಮುಖ ಗಣ್ಯರ ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪ ಈತನ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.