ದೂದ್‌ ಸಾಗರ್‌ ಬಳಿ ಹಳಿತಪ್ಪಿದ ಗೂಡ್ಸ್‌ ರೈಲು – ರೈಲು ಸಂಚಾರದಲ್ಲಿ ವ್ಯತ್ಯಯ- ವಾಸ್ಕೋ ಮತ್ತು ಯಶವಂತಪುರ ಎಕ್ಸ್‌ಪ್ರೆಸ್‌ ರದ್ದು

ಮಂಗಳೂರು (ಬೆಳಗಾವಿ): ಗೋವಾ ರೈಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೂಡ್ಸ್‌ ರೈಲು ಹಳಿ ತಪ್ಪಿದ್ದು, ಈ ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಇಂದು (ಆ.9) ಮುಂಜಾನೆ 17 ವ್ಯಾಗನ್‌ ಗಳನ್ನೊಳಗೊಂಡ  ಗೂಡ್ಸ್‌ ರೈಲು ಬ್ರಗಾಂಜಾ ಘಾಟ್ ವಿಭಾಗದಲ್ಲಿ ಸೋನಾಲಿಮ್ ಮತ್ತು ದೂದ್‌ ಸಾಗರ್ ನಿಲ್ದಾಣಗಳ ನಡುವೆ ಹಳಿತಪ್ಪಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳ ಇಂದಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಾಸ್ಕೋ ಮತ್ತು ಹುಬ್ಬಳ್ಳಿಯಿಂದ ಅಪಘಾತ ಸ್ಥಳಕ್ಕೆ ರೈಲು ಸಿಬ್ಬಂದಿಗಳು ಮತ್ತು ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ನೈರುಉತ್ಯ ರೈಲ್ವೇ ತಿಳಿಸಿದೆ.

LEAVE A REPLY

Please enter your comment!
Please enter your name here