ಮಂಗಳೂರು (ಕಾರವಾರ): ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ತಿಂಗಳೇ ಕಳೆದಿದೆ. ಈ ದುರ್ಘಟನೆಯಲ್ಲಿ ಕಾಣೆಯಾದ ಮೂವರ ಪತ್ತೆಗೆ ಮತ್ತು ಗಂಗಾವಳಿ ನದಿಯಲ್ಲಿ ಮುಳುಗಿದ ಲಾರಿ ಹೊರತೆಗೆಯಲು ಕಾರ್ಯಾಚರಣೆ ಮತ್ತೆ ಚುರುಕುಗೊಂಡಿದೆ. ಇದರ ನಡುವೆ ನದಿಗೆ ಉರುಳಿದ್ದ ಗ್ಯಾಸ್ ಟ್ಯಾಂಕರ್ ನ ಕೆಲ ಅವಶೇಷಗಳು ಪತ್ತೆಯಾಗಿವೆ.
ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ತಂಡ, ನೌಕಾದಳದ ಮುಳುಗು ತಜ್ಞರು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸದಸ್ಯರು, ಸ್ಥಳಿಯ ಮೀನುಗಾರರು ಸೇರಿ ಕಾರ್ಯಾಚರಣೆ ನಡೆಸುತ್ತಿದ್ದು, ನದಿಯಲ್ಲಿ ಬಿದ್ದ ಮರಗಳಿಗೆ ಕಬ್ಬಿಣದ ರೋಪ್ ಕಟ್ಟಿ, ಕ್ರೇನ್ನಿಂದ ಅವುಗಳನ್ನು ಎಳೆದು, ದಡಕ್ಕೆ ತರಲಾಗುತ್ತಿದೆ.