ಮಂಗಳೂರು (ಮುಂಬೈ): ಮುಂಬೈನ ಅಟಲ್ ಸೇತುವೆ ಮೇಲಿಂದ ಅರಬ್ಬೀ ಸಮುದ್ರಕ್ಕೆ ಬೀಳುವ ಸ್ಥಿತಿಯಲ್ಲಿದ್ದ ಸುಮಾರು 56 ವರ್ಷದ ಮಹಿಳೆಯೊಬ್ಬರ ಜೀವವನ್ನು ಟ್ಯಾಕ್ಸಿ ಚಾಲಕ ಹಾಗೂ ನಾಲ್ಕು ಮಂದಿ ಟ್ರಾಫಿಕ್ ಪೊಲೀಸರು ದಿಟ್ಟ ಕಾರ್ಯಾಚರಣೆಯ ಮೂಲಕ ಉಳಿಸಿದ್ದಾರೆ.
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಜೆ ಸುಮಾರು 7 ಗಂಟೆಗೆ ಮುಲುಂದ್ ನಿವಾಸಿ ರೀಮಾ ಮುಕೇಶ್ ಪಟೇಲ್ ಅವರು ಅಟಲ್ ಸೇತುವೆಗೆ ಟ್ಯಾಕ್ಸಿಯೊಂದರಲ್ಲಿ ಆಗಮಿಸಿ ನವ ಶೇವಾ ಬದಿಯಲ್ಲಿ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ನಂತರ ಸೇತುವೆ ಬದಿಗೆ ತೆರಳಿದ ಅವರು ಅಲ್ಲಿನ ರೈಲಿಂಗ್ನಲ್ಲಿ ಕುಳಿತಿದ್ದರು. ಆ ಸಂದರ್ಭ ಅದೇ ಹಾದಿಯಲ್ಲಿ ಪೊಲೀಸ್ ಗಸ್ತು ವಾಹನ ತೆರಳುತ್ತಿದ್ದುದನ್ನು ಗಮನಿಸಿದ ಮಹಿಳೆ ಆಯತಪ್ಪಿ ಇನ್ನೇನು ಬೀಳಲಿದ್ದಾರೆನ್ನುವಾಗ ಟ್ಯಾಕ್ಸಿ ಚಾಲಕ ತಕ್ಷಣ ಆಕೆಯ ಕೂದಲು ಹಿಡಿದು ಮೇಲಕ್ಕೆತ್ತುವ ಯತ್ನ ನಡೆಸಿದ್ದರು. ಇದಾಗುತ್ತಲೇ ನಾಲ್ಕು ಮಂದಿ ಟ್ರಾಫಿಕ್ ಪೊಲೀಸರು ರೈಲಿಂಗ್ ಮೇಲೆ ಹತ್ತಿ ಆಕೆಯನ್ನು ಹಿಡಿದು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Mumbai traffic police can be seen rescuing a woman who was on the verge of attempting suicide at the Atal Setu Bridge in Mumbai, Maharashtra.
But it was cab driver who held her through her hair, Give credit where its due.pic.twitter.com/SgGuAYLaEY
— زماں (@Delhiite_) August 16, 2024