ದಿ ಹಿಂದೂ ಪತ್ರಿಕೆಯ ಹಿರಿಯ ಉಪ ಸಂಪಾದಕ ದಿನಕರ್ ಇನ್ನಿಲ್ಲ

ಹೊಸದಿಲ್ಲಿ: ದಿ ಹಿಂದೂ ಪತ್ರಿಕೆಯ ಹಿರಿಯ ಉಪ ಸಂಪಾದಕ ದಿನಕರ್ ಇಂದೋರ್‌ನಲ್ಲಿ ನಿಧನರಾಗಿದ್ದಾರೆ.  ಹಿರಿಯ ಕ್ರೀಡಾ ಲೇಖಕರಾದ ದಿನಕರ್ ಭಾರತ ಹಾಗೂ  ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್  ಪಂದ್ಯಾಟದ ವರದಿ ಮಾಡಿದ್ದರು. ನಾಲ್ಕನೇ ಹಾಗೂ  ಅಂತಿಮ ಟೆಸ್ಟ್‌ ನ ವರದಿ ಮಾಡಲು ಅಹಮದಾಬಾದ್‌ಗೆ ತೆರಳಲು ತಯಾರಿ ನಡೆಸಿದ್ದ ದಿನಕರ್ ತಮ್ಮ ಹೋಟೆಲ್ ಕೋಣೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

‘ದಿ ಹಿಂದೂ’ ಗ್ರೂಪ್‌ನೊಂದಿಗೆ ಮೂರು ದಶಕಗಳಿಗೂ ಹೆಚ್ಚು ಸಮಯ  ಸೇವೆ ಸಲ್ಲಿಸಿರುವ 57 ವರ್ಷದ ದಿನಕರ್ ತಮ್ಮ ತಂದೆಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here