ಇಂಡೋನೇಷಿಯ: ಇಲ್ಲಿನ 9712 ಅಡಿ ಎತ್ತರವಿರುವ ಮೆರಾಪಿ ಅಗ್ನಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಸುಮಾರು ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೂದಿ ಅವರಿಸಿಕೊಂಡಿದೆ. ಜ್ವಾಲಾಮುಖಿ ಸ್ಫೋಟದಿಂದ ಒಂದೂವರೆ ಕಿಲೋಮೀಟರ್ನಷ್ಟು ಲಾವಾ ಹರಿದಿದೆ. ಮಾರ್ಚ್ 12 ರ ಮದ್ಯಾಹ್ನ ವೇಳೆ ಮೆರಾಪಿ ಅಗ್ನಿ ಪರ್ವತ ಸ್ಫೋಟಗೊಂಡಿದ್ದು ಸುತ್ತು ಮುತ್ತಲಿನ ಏಳು ಕಿ ಮೀ ವ್ಯಾಪ್ತಿ ಪ್ರದೇಶವನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ. ಸ್ಫೋಟದ ಬಳಿಕ ಹತ್ತಿರದ ಪ್ರದೇಶದಲ್ಲಿ ನಡೆಯುತ್ತಿದ್ದ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸರಕಾರ ಎಚ್ಚರಿಕೆ ನೀಡಿದೆ.ಜ್ವಾಲಾಮುಖಿ ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.