ಕುಸಿದ ಭಾರತದ ಆರ್ಥಿಕತೆ- ರಘುರಾಮ್‌ ರಾಜನ್‌ ಎಚ್ಚರಿಕೆ

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಕುಸಿತದ ಹಾದಿಯಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ  ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ. ಪಿಟಿಐಗೆ ನೀಡಿದ ಇಮೇಲ್ ಸಂದರ್ಶನದಲ್ಲಿ, ದೇಶದಲ್ಲಿ ಖಾಸಗಿ ಹೂಡಿಕೆಯ ಕೊರತೆ, ಹೆಚ್ಚುತ್ತಿರುವ ಬಡ್ಡಿ ದರ, ಅಂತಾರಾಷ್ಟ್ರೀಯ ಆರ್ಥಿಕ ಹಿಂಜರಿತದಿಂದಾಗಿ ಭಾರತವು 1950 ರಿಂದ 1980ರ ಅವಧಿಯಲ್ಲಿದ್ದ ಅತ್ಯಂತ ಕಡಿಮೆ ಶೇ.4 ಕ್ಕಿಂತ ಕಡಿಮೆ ಆರ್ಥಿಕ ಬೆಳವಣಿಗೆ ದರಕ್ಕೆ ತಳ್ಳಲ್ಪಡುವ ಅಪಾಯದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.4.4ಕ್ಕೆ ಇಳಿಕೆಯಾಗಿದ್ದು, ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಆರ್ಥಿಕ ಅಂಕಿಅಂಶಗಳು ಕೇವಲ ಕುಸಿತವನ್ನೇ ತೋರಿಸುತ್ತಿದೆ ಎಂದು ಹೇಳಿರುವ ಖಾಸಗಿ ವಲಯವು ಹೊಸ ಹೂಡಿಕೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದಿದ್ದಾರೆ.

 ಅದಾನಿ-ಹಿಂಡೆನ್‌ಬರ್ಗ್ ನಂತಹ ಪ್ರಕರಣಗಳು ಸರ್ಕಾರ ಮತ್ತು ಉದ್ಯಮದ ನಡುವಿನ ಪರೋಕ್ಷ ಸಂಬಂಧವನ್ನು ಕೊನೆಗೊಳಿಸಲು ಸಹಾಯ ಮಾಡಬಹುದು. ಆದರೆ ಈ ವಿಚಾರದಲ್ಲಿ ವಿದೇಶದಿಂದ ನಕಲಿ ಕಂಪನಿಗಳ ಮೂಲಕ ಹೂಡಿಕೆ ಮಾಡಿರುವ ಆರೋಪದ ಬಗ್ಗೆ ಸೆಬಿ ತನಿಖೆ ನಡೆಸದಿರುವುದು ಅಚ್ಚರಿಯನ್ನು ಮೂಡಿಸಿದೆ’. ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here