ಮಂಗಳೂರು: ಸಿಕ್ಕಿಂನ ನಾಥು ಲಾ ಮೌಂಟೇನ್ ಪಾಸ್ ಬಳಿ ಏ.4ರಂದು ಸಂಭವಿಸಿದ ಹಿಮ ಕುಸಿತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು ಹಲವರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ 12:20ರ ಸುಮಾರಿಗೆ ಹಿಮ ಕುಸಿತವಾಗಿದೆ.
ನಾಥು ಲಾ ಪಾಸ್ ಭಾರತ-ಚೀನಾದ ಗಡಿಭಾಗದಲ್ಲಿದ್ದು ಅದರ ರುದ್ರ ರಮಣೀಯ ಸೌಂದರ್ಯದಿಂದಾಗಿ ಪ್ರಮುಖ ಪ್ರವಾಸಿ ತಾಣವಾಗಿದೆ. ದೇಶ ವಿದೇಶದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಘಟನೆಯಲ್ಲಿ ಸುಮಾರು 22 ಮಂದಿಯನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ರಕ್ಷಣಾಕಾರ್ಯ ಮುಂದುವರಿದಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Six dead & many injured after #avalanche hit at 15 mile along the Jawaharlal Nehru (JN) road that connects #Gangtok with #Nathula Pass in #Sikkim.#Tsomgo pic.twitter.com/dEdWZ69aiz
— Arvind Chauhan (@Arv_Ind_Chauhan) April 4, 2023