ಮಂಗಳೂರು: ಮನುಷ್ಯನನ್ನು ಸರ್ವನಾಶ ಮಾಡುವ ಕೆಟ್ಟ ಚಟಗಳಲ್ಲಿ ಮಧ್ಯಪಾನ ಅಥವಾ ಕುಡಿತ ಅತ್ಯಂತ ಅಪಾಯಕಾರಿಯಾದದ್ದು. ಒಮ್ಮೆ ಕುಡಿತದ ಚಟಕ್ಕೆ ಬಲಿಯಾದರೆ ಜೀವನಪರ್ಯಂತ ಅದನ್ನು ಬಿಡಲು ಸಾಧ್ಯವಿಲ್ಲ.
ಕುಡಿತ, ಚಟಕ್ಕೆ ಬಿದ್ದ ವ್ಯಕ್ತಿಯನ್ನಲ್ಲದೆ, ಅವನನ್ನು ಅವಲಂಬಿಸಿರುವ ಹೆಂಡತಿ ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುತ್ತದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕುಡಿತಕ್ಕೆ ಹಣ ಬೇಕೆಂದು ಮನೆ, ಹೊಲ, ಒಡವೆ, ವಸ್ತು ಮಾರಿ ಕುಡಿತಕ್ಕೆ ಹಣ ಹೊಂದಿಸುವ ಇವರು ಕಳ್ಳತನ, ಕೊಲೆ ಯಾವುದಕ್ಕೂ ಹೇಸುವವರಲ್ಲ. ಕುಡಿತದ ಚಟಕ್ಕೆ ಬಲಿ ಬಿದ್ದ ಈ ವ್ಯಕ್ತಿಯ ಕಥೆ ಇದಕ್ಕೆ ಹೊರತಲ್ಲ. 50 ವರ್ಷ ವಯಸ್ಸಿನ ಮದ್ಯ ವ್ಯಸನಿಯೊಬ್ಬ ಮದ್ಯ ಸೇವಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ತನ್ನ 12ನೇ ಪತ್ನಿಯನ್ನು ಕಡಿದು ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಾಂಡ್ ನ ಬೊಕಾರ್ ಜಿಲ್ಲೆ ಗಿರಿಧ್ ನ ತಾರಾಪುರದಲ್ಲಿ ನಡೆದಿದೆ. ಹತ್ಯೆ ಮಾಡಿದ ಈ ಮದ್ಯ ವ್ಯಸನಿ ಆರೋಪಿ ರಾಮಚಂದ್ರ ತುರಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ವಿಪರೀತ ಕುಡಿತದ ಚಟ್ಟವಿದ್ದ ರಾಮಚಂದ್ರ ತುರಿ ಕುಡಿತಕ್ಕೆ ಆಡ್ಡ ಬಂದರೆ ಪತ್ನಿಗೆ ಸಿಕ್ಕಾ ಪಟ್ಟೆ ಹೊಡೆಯುತ್ತಿದ್ದ. ಇದೇ ಕಾರಣಕ್ಕೆ ಈ ಹಿಂದೆ ಮದುವೆಯಾಗಿದ್ದ 11 ಪತ್ನಿಯರು ವಿಚ್ಛೇದನ ನೀಡಿ ಈತನಿಂದ ದೂರವಾಗಿದ್ದರು. 12ನೇ ಪತ್ನಿ ಮದ್ಯ ಸೇವನೆಗೆ ಬಿಡಲಿಲ್ಲ ಎಂದು ಅವಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ತನ್ನ 30ನೇ ವಯಸ್ಸಿನಲ್ಲಿ ಸಾವಿತ್ರಿ ದೇವಿ ಎಂಬ ಮೊದಲ ಪತ್ನಿಯಲ್ಲಿ ತುರಿಗೆ ನಾಲ್ಕು ಮಕ್ಕಳಿದ್ದಾರೆ. ಓರ್ವ ಹೈದರಾಬಾದ್ ಕೂಲಿ ಕೆಲಸ ಮಾಡುತ್ತಿದ್ದಾನೆ. ಉಳಿದ ಮೂವರು ಮಕ್ಕಳು ಗ್ರಾಮದಲ್ಲಿ ನಡೆದ ಮದುವೆಯೊಂದಕ್ಕೆ ತೆರಳಿದ್ದ ವೇಳೆ ಕುಡಿಯಲು ಬಿಡಲಿಲ್ಲ ಎಂದು 12ನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.