ಕಾಮವಾಂಛೆ ಕುರುಡು….. 85ರ ವೃದ್ದೆಯ ಕೊಲೆ, ಅತ್ಯಾಚಾರ

ಮಂಗಳೂರು: 85 ವರ್ಷದ  ವೃದ್ದೆಯನ್ನು ಬರ್ಬರವಾಗಿ ಕೊಂದು ಬಳಿಕ ಅತ್ಯಾಚಾರ ಎಸಗಿದ ಅಮಾನುಷ ಕೃತ್ಯ ಹಾಸನ ಜಿಲ್ಲೆ ಅರಸೀಕೆರೆಯ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಮಿಥುನ್ ಅತ್ಯಾಚಾರ ಎಸಗಿದ ಆರೋಪಿ.

5 ವರ್ಷಗಳ ಹಿಂದೆ ಇದೇ ರೀತಿ  ಈತ ವೃದ್ದೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದೇ ಸುಳಿವಿನ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಮಿಥುನ್ ತಾನು ಈ ಹೇಯ ಪಾಪ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಜಮೀನಿನ ಬಳಿ ತರಳಿದ್ದ ವೃದ್ದೆಯನ್ನು ಅತ್ಯಾಚಾರ ಮಾಡಲು ಮಿಥುನ್ ಯತ್ನಿಸಿದ್ದ. ಇದಕ್ಕೆ ಪ್ರತಿರೋಧ ತೋರಿದಾಗ ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ನಡೆಸಿ, ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. 

LEAVE A REPLY

Please enter your comment!
Please enter your name here