ಉಚಿತ ಪ್ರಯಾಣಕ್ಕೂ ಟಿಕೆಟ್ ಕಡ್ಡಾಯ

ಮಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಸಂಚರಿಸಲು ಟಿಕೆಟ್ ಪಡೆಯಬೇಕಾಗಿದೆ.


ಇದಕ್ಕಾಗಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಹೊಸ ಮಾದರಿ ಟಿಕೆಟ್ ಗಳನ್ನು ಬಿಡುಗಡೆ ಮಾಡಲಿವೆ. ಆದರೆ ಈ ಟಿಕೆಟ್ ಪಡೆಯಲು ಮಹಿಳೆಯರು ಹಣ ತೆರಬೇಕಾಗಿಲ್ಲ. ಟಿಕೆಟ್ ನಲ್ಲಿ ಯಾವುದೇ ಬೆಲೆಯೂ ನಮೂದಾಗಿರುವುದಿಲ್ಲ. ಆದರೆ , ಎಲ್ಲಿಂದ ಎಲ್ಲಿಗೆ ಪ್ರಯಾಣ ಎನ್ನುವ ಮಾಹಿತಿ ಹಾಕಿ ನಿರ್ವಾಹಕರು ಟಿಕೆಟ್ ನೀಡಲಿದ್ದಾರೆ. ಸರಕಾರ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಹಣ ನೀಡಲು ಲೆಕ್ಕ ಬೇಕಾಗಿರುವ ಕಾರಣಕ್ಕೆ ಈ ಮಾರ್ಗ ಅನುಸರಿಸಲಾಗಿದೆ. ರಾಜ್ಯದ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಶಕ್ತಿ ಹೆಸರಿನ ಈ ಯೋಜನೆಗೆ ಜೂನ್ 11ರಂದು ಚಾಲನೆ ಸಿಗಲಿದೆ.

LEAVE A REPLY

Please enter your comment!
Please enter your name here