



ಮಂಗಳೂರು: ಒಡಿಸ್ಸಾದಲ್ಲಿ ನಡೆದ ರೈಲು ಅಪಘಾತದ ಪ್ರಕರಣಕ್ಕೆ ಕೋಮಬಣ್ಣ ನೀಡಿ ರೈಲ್ವೆ ಹಳಿಯ ಬಳಿ ಮಸೀದಿ ಇತ್ತು ಎಂದು ಫೋಟೋ ಒಂದನ್ನು ತುಮಕೂರಿನ ಬಿಜೆಪಿ ನಾಯಕಿಯೊಬ್ಬರು ಫೇಸ್ಬುಕಲ್ಲಿ ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ತುಮಕೂರಿನ ಶಕುಂತಲಾ ಎಸ್ ಎನ್ನುವವರು ಈ ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದೇ ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಫೋಟೋ ಪೋಸ್ಟ್ ಮಾಡಿದ್ದರು.
ಘಟನೆಗೆ ಕೋಮು ಆಯಾಮ ನೀಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒಡಿಶಾ ಪೊಲೀಸರು ಎಚ್ಚರಿಸಿದ್ದಾರೆ. ಪೋಸ್ಟ್ ಹಂಚಿಕೊಂಡವರ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಓಡಿಶಾ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.














