ದೇಶದ ಮೊದಲ ಸ್ವಯಂ ಚಾಲಿತ ಕಾರು ಅನಾವರಣ

ಮಂಗಳೂರು (ಬೆಂಗಳೂರು): ಮೈನೆಸ್ ಝೀರೋ ಎಂಬ ಬೆಂಗಳೂರು ಮೂಲದ ಕಂಪನಿ ಭಾರತದ ಮೊದಲ ಸ್ವಯಂಚಾಲಿತ ಕಾರನ್ನು ಅನಾವರಣಗೊಳಿಸಿದೆ.


ಸ್ವಯಂ ಚಾಲಿತವಾಗಿ ಸಂಚರಿಸುವ ಝೆಡ್ ಪೊಡ್ ಎಂಬ ಸೆಲ್ಫ್ ಡ್ರೈವಿಂಗ್ ಕಾರನ್ನು ಅನಾವರಣಗೊಳಿಸಿದ್ದು, ಇದು ದೇಶದ ಮೊದಲ ಸ್ವಯಂಚಾಲಿತ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಝೆಡ್ ಪೊಡ್ ಸ್ವಯಂ ಚಾಲಿತ ಕಾರು ತನ್ನ ಕ್ಯಾಮರಾ ಸೆನ್ಸರ್ ಶೂಟ್ ಮೂಲಕ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಚಾಲನೆ ಮಾಡಿಕೊಂಡು ಹೋಗಬಲ್ಲದು ಎಂದು ಕಂಪನಿ ಹೇಳಿದೆ. ಸ್ಟೇರಿಂಗ್ ವೀಲ್ ಇಲ್ಲದೆ ಇರುವುದು ಈ ಕಾರಿನ ವಿಶೇಷತೆ. ಟ್ರಾಫಿಕ್ ಸೇರಿ ಡ್ರೈವಿಂಗ್ ಪರಿಸ್ಥಿತಿಗಳನ್ನು ವಿಶ್ಲೇಷಿಸಲು ಕಾರಿನ ಆಯಕಟ್ಟಿನ ಜಾಗದಲ್ಲಿ ಇರಿಸಲಾಗಿರುವ ಹೈ ರೆಸ್ಯುಲೇಷನ್ ಕ್ಯಾಮೆರಾಗಳನ್ನು ಇದು ಬಳಸುತ್ತದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಚಾಲನೆ ಮಾಡುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ ಎಂದು ಸಂಸ್ಥೆ ಹೇಳಿದೆ. ಇತರ ಕಂಪನಿಗಳು ಅಭಿವೃದ್ಧಿ ಪಡಿಸಿದ ಕಾರುಗಳಿಗಿಂತ ಝೆಡ್ ಪೊಡ್ ಭಿನ್ನವಾಗಿರುವುದಕ್ಕೆ ಇದರ ಕ್ಯಾಮೆರಾ ತಂತ್ರಜ್ಞಾನ ಕಾರಣ, ಇದು ದುಬಾರಿ ಸೆನ್ಸರ್ ಗಳಿಗಿಂತ ಅನುಕೂಲಕರ ಎಂದು ಕಂಪನಿ ಹೇಳಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here