ಮಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ನೊಂದಣಿ ಪ್ರಮಾಣ ಪತ್ರವನ್ನು ಪುತ್ತೂರಿನ ಪುತ್ತಿಲ ಪರಿವಾರದ ಕಚೇರಿಯಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಡುಗಡೆಗೊಳಿಸಿದರು.
ಜಾತ್ರೆಗಳಲ್ಲಿ ದೊಡ್ಡ ಮೊತ್ತಕ್ಕೆ ಅಂಗಡಿಗಳು ಏಲಂ ಆಗುವುದನ್ನು ವಿರೋಧಿಸಿ ಮೊತ್ತವನ್ನು ಕಡಿಮೆ ಮಾಡುವ ಮೂಲಕ ಬಡ ವ್ಯಾಪಾರಸ್ಥರಿಗೆ ಮತ್ತು ಆಗಮಿಸುವ ಭಕ್ತಾಧಿಗಳಿಗಾಗುವ ಆರ್ಥಿಕ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದಲ್ಲಿ ಸಂಘ ನೊಂದಣಿಯಾಗಿದೆ. ಮುಂದಿನ ದಿನಗಳಲ್ಲಿ ಜಾತ್ರಾ ವ್ಯಾಪಾರಸ್ಥರ ಬೃಹತ್ ಸಮಾವೇಶವನ್ನು ಏರ್ಪಡಿಸುವ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಗಣೇಶ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಗೋವಿಂದ ದಾಸ್, ಪೃಥ್ವಿ ರಾಜ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.