ಮಂಗಳೂರು ಫಿಜ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ – ಸ್ಟಾಟಿಕ್ ನಿಂದ ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯವಸ್ಥೆ

ಮಂಗಳೂರು: ಭಾರತದ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನಗಳ ತ್ವರಿತ ಗತಿಯ ಚಾರ್ಜಿಂಗ್ ವ್ಯವಸ್ಥೆ ನೀಡುವ ಕಂಪನಿ ಸ್ಟಾಟಿಕ್ ಮಂಗಳೂರಿನ ಗ್ರಾಹಕರ ಅಗತ್ಯವನ್ನು ಮನಗಂಡು ಪಾಂಡೇಶ್ವರದ ಫಿಜ್ಜಾ ಬೈ ನೆಕ್ಸಸ್ ಮಾಲ್ ಸಹಭಾಗಿತ್ವದಲ್ಲಿ ಎರಡು ಫಾಸ್ಟ್ ಚಾರ್ಜಿಂಗ್ ಸಿಸ್ಟಮ್ ಅನ್ನು ಅಳವಡಿಸಿದೆ.

‌ಇಲ್ಲಿ ಏಕಕಾಲದಲ್ಲಿ ಎರಡು ಇಲೆಕ್ಟ್ರಿಕ್ ಕಾರುಗಳನ್ನು 40 ನಿಮಿಷದಲ್ಲಿ 80% ಚಾರ್ಜ್ ಮಾಡಬಹುದಾಗಿದೆ ಎಂದು ಸ್ಟಾಟಿಕ್ ನ ಸಂಸ್ಥಾಪಕ ಸದಸ್ಯ ಹಾಗೂ ತಾಂತ್ರಿಕ ಕಾರ್ಯನಿರ್ವಹಣಾಧಿಕಾರಿ ಆಕಾಶ್‌ದೀಪ್ ತ್ಯಾಗಿ ತಿಳಿಸಿದ್ದಾರೆ. ಕರ್ನಾಟಕ ಮತ್ತು ಕರಾವಳಿಯಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದು ಮಾಲ್ ಗೆ ಭೇಟಿ ನೀಡುವವರಿಗೆ ಇದು ಸಹಾಯಕಾರಿಯಾಗಲಿದ್ದು ಈ ಗ್ರಾಹಕ ಸ್ನೇಹಿ ಚಾರ್ಜಿಂಗ್ ವ್ಯವಸ್ಥೆ  ಉಪಯೋಗವಾಗಲಿದೆ. ನಮ್ಮ ಯೋಜನೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳಲಿವೆ ಎಂದು ಹೇಳಿದ್ದಾರೆ.

ಫಿಜ್ಜಾ ಬೈ ನೆಕ್ಸಸ್ ಮಾಲ್ ಮಂಗಳೂರಿನ ಅಂತರಾಷ್ಟ್ರೀಯ ಮಟ್ಟದ ಮಾಲ್ ಆಗಿದ್ದು ಜಗತ್ತಿನ ಇನ್ನೂರಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್ಗಳು ಇಲ್ಲಿವೆ. ಗ್ರಾಹಕರು ತಮ್ಮ ವ್ಯವಾಹಾರದೊಂದಿಗೆ ವಿಶೇಷ ಫುಡ್ ಕೋರ್ಟ್, ಸಿನಿಮಾ ಮತ್ತು ಆಟೋಟಗಳ ವ್ಯವಸ್ಥೆ ಇಲ್ಲಿನ ಜನಾಕರ್ಷಣೆಯಾಗಿದೆ.

ಮಂಗಳೂರು ಮಾಲ್ ನ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಮಾತನಾಡಿ “ಸ್ಟಾಟಿಕ್ ನ ಈ ಚಾರ್ಜಿಂಗ್ ವ್ಯವಸ್ಥೆ ಗ್ರಾಹಕರಿಗೆ ಅನುಕೂಲವಾಗಿದ್ದು ನಮ್ಮಲ್ಲಿ ಬರುವ ಗ್ರಾಹಕರಿಗೆ ಹೆಚ್ಚಿನ ಉಪಯೋಗವಾಗಲಿದೆ. ಸ್ಟಾಟಿಕ್ ಕಂಪನಿ ಈ ವರ್ಷದಲ್ಲಿ ಭಾರತದಾದ್ಯಂತ 20 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್ ಗಳನ್ನು ಅಳವಡಿಸುವ ಗುರಿ ಹೊಂದಿದೆ. ಹಾಗೆ ಈ ಚಾರ್ಜಿಂಗ್ ವ್ಯವಸ್ಥೆ ಫ್ರಾನ್ಚೈಸಿ ಮಾದರಿಯಲ್ಲಿ ಇರಲಿದೆ” ಎಂದರು.

ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಫಿಜ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ ಈ ಚಾರ್ಜಿಂಗ್ ಸಿಸ್ಟಮ್ ಬಂದಿರುವುದು ಬಳಕೆದಾರರಿಗೆ ಸಂತೋಷದ ವಿಷಯವಾಗಿದೆ.

LEAVE A REPLY

Please enter your comment!
Please enter your name here