ಕಾಡುನಾಯಿ (Cuon Alpinus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಸಾಮಾಜಿಕ ಪ್ರಾಣಿ, ಕುಟುಂಬ ಸಮೇತವಾಗಿ ಗುಂಪುಗಳಲ್ಲಿ ಚಲಿಸಿ ಬೇಟೆಯಾಡುತ್ತದೆ. ಆಫ್ರಿಕಾ ಖಂಡದ ಸೀಳು ನಾಯಿಗಳಿಗಿಂತ ಸ್ವಲ್ಪ ಗಾತ್ರದಲ್ಲಿ ಚಿಕ್ಕದಾಗಿದ್ದು, ಗಂಡು 4.5 ಕೆ.ಜಿ.ಯಷ್ಟು ಹೆಣ್ಣಿಗಿಂತ ತೂಕ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಈ ಸೀಳು ನಾಯಿಯ ತೂಕ 10-25 ಕೆ.ಜಿ. ಇರುವುದು.
34-45 ಇಂಚಿನಷ್ಟು ಅಗಲವಿದ್ದು, ಬಾಲವು 18 ಇಂಚುಗಳಿರುತ್ತದೆ. ಕಿವಿಗಳು ಮೊನಚಾಗಿರದೆ ದುಂಡಾಗಿರುತ್ತದೆ, ಇವುಗಳ ಹೊಟ್ಟೆ ಸುಮಾರು 2.9 ಕೆ.ಜಿ.ಯಷ್ಟು ಆಹಾರವನ್ನು ಹಿಡಿದಿಟ್ಟುಕೊಳ್ಳುತ್ತದೆ. 10-12 ಅಡಿ ಎತ್ತರಕ್ಕೆ ಜಿಗಿಯಬಲ್ಲದು ಹಾಗೂ 17-20 ಅಡಿಯಷ್ಟು ದೂರು ನೆಗೆಯಬಲ್ಲದು. ತನ್ನ ಈ ಸಾಮರ್ಥ್ಯದಿಂದ ಬೇಟೆಯನ್ನು ಬಹು ದೂರ ಅಟ್ಟಿಸಿ ಓಡಿಸಿ ಬಸವಳಿಸಿ ನಂತರ ಸಾಯಿಸುವುದು.
ಬೇಟೆಯಾಡಿದ ನಂತರ ಬೇಟೆಯ ಆಹಾರವನ್ನು ಮೊದಲು ಮರಿಗಳಿಗೆ ಉಣಲು ಬಿಡುವುದು. ಕೋರೆ ಹಲ್ಲುಗಳು ಚಿಕ್ಕದಾಗಿ, ಚೂಪಾಗಿ ಅತ್ಯಂತ ಹರಿತವಾಗಿರುವುವು. ಏಳು ಕೆಳ ದವಡೆಯ ಹಲ್ಲುಗಳಿವೆ. ಮೇಲಿನ ದವಡೆ ಹಲ್ಲುಗಳು ದುರ್ಬಲವಾಗಿರುತ್ತವೆ. ಅಗಲವಾದ ಬುರುಡೆ, ಚಿಕ್ಕ ಮುಸುಡಿಯನ್ನು ಹೊಂದಿರುತ್ತವೆ. ಮನುಷ್ಯನಿಂದ ದೂರ ಸರಿವ ಈ ಪ್ರಾಣಿಯು ಭಯಾನಕವಾದಂತ ಹುಲಿ, ಕಾಡುಹಂದಿಗಳೊಂದಿಗೂ ಗುಂಪಿನಲ್ಲಿ ಸೆಣೆಸಾಡಿ ಸೋಲಿಸುತ್ತದೆ. ಅವಸಾನದ ಅಂಚಿಲ್ಲಿ ಈ ಸೀಳು ನಾಯಿಯೂ ಒಂದಾಗಿದೆ. ವಾಸಸ್ಥಾನದ ನಾಶ, ಆಹಾರ ಅಥವಾ ಸೋಂಕಿನ ಕಾರಣ ಅಥವಾ ಇತರೇ ಮನುಜ, ಪ್ರಾಣಿಗಳು ಅದರ ಬೇಟೆಯನ್ನು ತಿನ್ನುವುದರಿಂದ ಇವು ಸಾವನ್ನಪ್ಪುತ್ತಿವೆ.