ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕಾ ಅನುಮತಿ

ಮಂಗಳೂರು: ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕಾದಲ್ಲಿ ಅನುಮತಿ ನೀಡಲಾಗಿದೆ. ಅಮೆರಿಕಾದ ಎವಿಯೇಷನ್ ಆಡಳಿತ ಸಂಸ್ಥೆ ಈ ಅನುಮತಿ ನೀಡಿದೆ.

ಈ ಕಾರಿನ ಬೆಲೆ 8.6 ಕೋಟಿ ರೂಪಾಯಿ ಆಗಿದ್ದು, ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರ್ ಆಗಿದೆ. ಇದು ಸುಮಾರು 322 ಕಿಲೋಮೀಟರ್ ದೂರ ಹಾರುವ ಸಾಮರ್ಥ್ಯ ಹೊಂದಿದ್ದು, ಮುಂಗಡವಾಗಿ ಕಾಯ್ದಿರಿಸಿದ ಬಳಿಕ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ.

2025ಕ್ಕೆ ಈ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. 2022 ರಲ್ಲಿ ಈ ಕಾರನ್ನು ಅನಾವರಣ ಗೊಳಿಸಿದ್ದು, ಸಾರ್ವಜನಿಕರ ರಸ್ತೆಗಳಲ್ಲಿ ಓಡಿಸಬಹುದು ಎಂದು ಕಂಪನಿ ಹೇಳಿತ್ತು. ಅಲ್ಲದೆ ಇದು ಲಂಬಾಕಾರದಲ್ಲಿ ಟೇಕಾಫ್ ಮತ್ತು ಲ್ಯಾಂಡ್ ಆಗುವ ಸಾಮರ್ಥ್ಯ ಹೊಂದಿದೆ.

LEAVE A REPLY

Please enter your comment!
Please enter your name here