ಮಂಗಳೂರು (ವಾರಣಾಸಿ): ಉತ್ತರ ಪ್ರದೇಶ ಮೂಲದ ಮೋತಿ ಎಂಬ ಬೀದಿನಾಯಿ ಈಗ ಪಾಸ್ ಪೋರ್ಟ್ ಪಡೆದುಕೊಂಡಿದ್ದು, ಈ ತಿಂಗಳು ಇಟಲಿಗೆ ಹೋಗಲು ರೆಡಿಯಾಗುತ್ತಿದೆ. ಇಟಾಲಿಯನ್ ಲೇಖಕಿ ವೆರಾ ಲಝರೆಟ್ಟಿ ಮೋತಿಯನ್ನು ದತ್ತು ಪಡೆದಿದ್ದು, ಇಟಲಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.
ವೆರಾ ಅವರು ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ವಾರಣಾಸಿಯಲ್ಲಿ ಈ ಬೀದಿ ನಾಯಿ ಜೊತೆಗೆ ಒಲವು ಬೆಳೆಸಿಕೊಂಡು ಈಗ ಅದನ್ನು ಸಾಕಲು ಮುಂದಾಗಿದ್ದಾರೆ. ಜನರು ಮೋತಿಗೆ ಹೊಡೆದು ಹಿಂಸೆ ನೀಡುತ್ತಿದ್ದರು. ಈ ಕಾರಣಕ್ಕೆ ಅವರಿಂದ ಅದನ್ನು ಕಾಪಾಡಿ ಸಾಕಲು ಮುಂದಾಗಿದ್ದೇನೆ ಎಂದು ವೆರಾ ಹೇಳಿದ್ದಾರೆ. ಮೋತಿಯನ್ನು ದತ್ತು ಪಡೆದು ಇಟಲಿಗೆ ಕರೆದೊಯ್ಯಲು ವೆರಾ ಹಲವು ಬಾರಿ ದೆಹಲಿಗೆ ವಿಮಾನವೇರಿದ್ದಾರೆ. ಪ್ರಾಣಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವಾಗ ವ್ಯಾಕ್ಸಿನೇಷನ್ ಸೇರಿದಂತೆ ಇನ್ನೂ ಅನೇಕ ತಪಾಸಣೆ ಮತ್ತು ದಾಖಲೆಗಳನ್ನು ಮಾಡಬೇಕಾಗಿದೆ. ಮೋತಿಗೆ ಮೈಕ್ರೋ ಚಿಪ್ ಕೂಡ ಅಳವಡಿಸಲಾಗುವುದು ಎಂದು ಲೇಖಕಿ ವೆರಾ ಹೇಳಿದ್ದಾರೆ.