ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತೀ ಎತ್ತರದ ಬಾಲಸುಬ್ರಹ್ಮಣ್ಯ ಮೂರ್ತಿ

ಮಂಗಳೂರು(ಶಿವಮೊಗ್ಗ): ಜಗತ್ತಿನ ಅತೀ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿ ಕರ್ನಾಟಕದಲ್ಲಿ ತಲೆ ಎತ್ತಲಿದೆ.

151 ಅಡಿಗಳ ಶ್ರೀ ಬಾಲಸುಬ್ರಹ್ಮಣ್ಯ ಬೃಹತ್ ಮೂರ್ತಿಯು ಶಿವಮೊಗ್ಗ ನಗರದ ಗುಡ್ಡೇಕಲ್‌ ದೇವಸ್ಥಾನ ಆವರಣದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಈಗಾಗಲೇ ಶಿಲಾನ್ಯಾಸ ಕಾರ್ಯ ನಡೆದಿದ್ದು, ಇನ್ನೆರಡು ವರ್ಷಗಳಲ್ಲಿ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.

ಬೃಹತ್‌ ಗಾತ್ರದ ಬಂಡೆ ಮೇಲೆ ಈ ಪ್ರತಿಮೆ ನಿರ್ಮಿಸಲಾಗುತ್ತಿದೆ. ಬಂಡೆ ಮೇಲೆ ಕಾಂಕ್ರಿಟ್‌ ಬೆಡ್‌ ನಿರ್ಮಿಸಿ, ಅದರ ಮೇಲೆ ಪ್ರತಿಮೆ ಸ್ಥಾಪಿಸಲಾಗುತ್ತದೆ. ಬಾಲಸುಬ್ರಹ್ಮಣ್ಯಸ್ವಾಮಿ ಮೂರ್ತಿ ಜತೆಗೆ ಅವರ ವಾಹನ ನವಿಲಿನ ಪ್ರತಿಮೆಯೂ ಇರಲಿದೆ. ಮಲೇಷಿಯಾ ಮತ್ತು ಸೇಲಂನಲ್ಲಿ ಬೃಹತ್‌ ಮುರುಗನ್‌ ಪ್ರತಿಮೆ ನಿರ್ಮಿಸಿದ ಶಿಲ್ಪಿ ತ್ಯಾಗರಾಜನ್‌ ಅವರೇ ಶಿವಮೊಗ್ಗದಲ್ಲೂ ಈ ಪ್ರತಿಮೆ ನಿರ್ಮಿಸಲಿದ್ದಾರೆ. ಶಿವಮೊಗ್ಗದ ಎಲ್ಲ ದಿಕ್ಕುಗಳಿಂದಲೂ ಪ್ರತಿಮೆ ಕಾಣಿಸಲಿದೆ.

LEAVE A REPLY

Please enter your comment!
Please enter your name here