ಮೊರಕ್ಕೊ ಭೂಕಂಪ – ಸಾವಿನ ಸಂಖ್ಯೆಯಲ್ಲಿ ಏರಿಕೆ – ಮುಂದುವರಿದ ಪರಿಹಾರ ಕಾರ್ಯ

ಮಂಗಳೂರು(ಮೊರಕ್ಕೊ): ಭೀಕರ ಭೂಕಂಪದಿಂದ ತತ್ತರಿಸಿರುವ ಮೊರಕ್ಕೊದಲ್ಲಿ ಮೃತಪಟ್ಟವರ ಸಂಖ್ಯೆ 2800ರನ್ನು ದಾಟಿದೆ.

ಭೂಕಂಪದಿಂದ ಕುಸಿದ ಕಟ್ಟಡದ ಅವಶೇಷಗಳ ಅಡಿ ಬದುಕಿರುವವರಿಗಾಗಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಈ ಕಾರ್ಯದಲ್ಲಿ ಸ್ಪೈನ್‌, ಬ್ರಿಟನ್‌ ಮತ್ತು ಕತಾರ್‌ ನಿಂದ ಆಗಮಿಸಿದ ತಂಡಗಳು ನಿರಂತರವಾಗಿ ತೊಡಗಿಕೊಂಡಿದೆ. ಹೈ ಅಟ್ಲಾಸ್‌ ಪರ್ವತಶ್ರೇಣಿಯಲ್ಲಿ ಸೆ.8 ರಂದು ಸಂಭವಿಸಿದ 6.8 ತೀವ್ರತೆಯ ಭೂಕಂಪದಿಂದಾಗಿ ಅಪಾರ ಸಾವುನೋವು ಸಂಭವಿಸಿದೆ. ಅಧಿಕೃತ ವರದಿ ಪ್ರಕಾರ 2862 ಮಂದಿ ಮೃತಪಟ್ಟಿದ್ದು, 2562 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಕ್ಕಹಾಕಿಕೊಂಡಿರುವವರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಪರಿಹಾರ ತಂಡಗಳು ಹೇಳಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

 

LEAVE A REPLY

Please enter your comment!
Please enter your name here