ಪ್ರಾಣಿ ಪ್ರಪಂಚ-88

ಸೀಲ್‌ (Pusa sibirica)

ಮಕ್ಕಳಿಗಾಗಿ ವಿಶೇಷ ಮಾಹಿತಿ

ನಯವಾದ, ಮಾಂಸ ತುಂಬಿದ ದೇಹ, ತೆವಳಲು ರೆಕ್ಕೆ (Flippers) ಹಾಗೂ ಬಾಲ, ಕಂದುಬಣ್ಣ, ದಪ್ಪನೆಯ ತುಪ್ಪಟದ ಚರ್ಮ, ಕಡಲಿನಲ್ಲಿ ಕಡಲತಟಿಯಲ್ಲಿ ಜೀವಿಸಲು ಒಗ್ಗುವಂತ ದೇಹರಚನೆ, ಪುಟ್ಟ ಅಗಲವಾದ ಕಾಲ್ಗಳು. ಒಟ್ಟಿನಲ್ಲಿ ಸುಂದರವಾದ ವಿಶಿಷ್ಠ ಜಲಚರ ಪ್ರಾಣಿ.

70 ಕೆ.ಜಿ.ಯಿಂದ 4000 ಕೆ.ಜಿ ತೂಕವಿರುವ ವಿವಿಧ ತಳಿಯ ಅಥವಾ ಉಪ ಜಾತಿಯ ಪ್ರಭೇದಗಳಿವೆ. ಗುಂಪುಗಳಲ್ಲಿಯೇ ಜೀವಿಸುತ್ತದೆ. ಗಂಡು ಕಡಲ ಸಿಂಹ ತನ್ನ ಪ್ರಾಂತ್ಯದ ವಿಸ್ತರಣೆ ಹಾಗೂ ಸಂಕ್ಷಣೆಗೆ ಹೆಸರುವಾಸಿ.

ಸೀಲ್‌ ನ ಒಂದು ಪ್ರಭೇದವಾದ ಕ್ಯಾಲಿಫೋರ್ನಿಯಾದ ಸೀಲ್‌ ಮಾನವನ ಆಜ್ಞೆಗಳನ್ನು ಚೆನ್ನಾಗಿ ಅರಿಯುವುದರಿಂದ ಚೆನ್ನಾಗಿ ಪಳಗಿಸಬಹುದಾದ್ದರಿಂದ ಸರ್ಕಸ್‌ ಗಳಲ್ಲಿ ಮನರಂಜನೆಗಾಗಿ ಬಳಸುತ್ತಾರೆ. ಜೊತೆ ಜೊತೆಗೆ ಅಮೇರಿಕಾದ ರಕ್ಷಣಾ ಕಾರ್ಯ ಪಡೆಯೂ ಕೂಡ ತಮ್ಮ ದೇಶದ ರಕ್ಷಣಾ ಕಾರ್ಯ ಚಟುವಟಿಕೆಗಳಿಗೆ ತರಬೇತಿ ನೀಡಿ ಬಳಸಿಕೊಳ್ಳುತ್ತಾರೆ.

 

LEAVE A REPLY

Please enter your comment!
Please enter your name here