ವಾಹನ ದಟ್ಟನೆಯ ರಸ್ತೆಯಲ್ಲಿ ಯೋಗದ ರೀಲ್ಸ್ ಮಾಡಿದ ಯುವತಿ – ಕ್ಷಮೆ ಕೇಳಿಸಿ ಚಳಿ ಬಿಡಿಸಿದ ಪೊಲೀಸರು

ಮಂಗಳೂರು: ಯುವತಿಯೊಬ್ಬಳು ನಡು ರಸ್ತೆಯಲ್ಲಿ ಯೋಗ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಳೆಯ ನಡುವೆ ವಾಹನ ದಟ್ಟನೆ ಇರುವ ರಸ್ತೆಯಲ್ಲಿ ಯುವತಿಯೊಬ್ಬಳು ಜಾಗಿಂಗ್‌ ಉಡುಪಿನಲ್ಲಿ ಯೋಗ ಮಾಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಯುವತಿಯ ಫಿಟ್ನೆಸ್‌ ಕಸರತ್ತಿನ ಈ ವಿಡಿಯೋ ವೈರಲ್ ಆಗಿದೆ. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಗುಜರಾತ್ ಪೊಲೀಸರು ಯುವತಿಯ ಬಳಿ ಕ್ಷಮೆ ಯಾಚಿಸುವಂತೆ ಮಾಡಿದ್ದು, ಆ ವಿಡಿಯೋವನ್ನು ಸ್ವತಃ ತಾವೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.

LEAVE A REPLY

Please enter your comment!
Please enter your name here