ಬ್ರಿಟಿಷ್ ಸರ್ಕಾರಕ್ಕೆ ನುಂಗಲಾರದ ತುತ್ತಾದ ಗಾಂಧೀಜಿ
ಗಾಂಧಿ ಬ್ರಿಟಿಷ್ ಸರ್ಕಾರದ ವಿರುದ್ಧ ಚಳುವಳಿಯನ್ನು ಶಕ್ತಿಯುವಾಗಿ ಸಂಘಟಿಸುತ್ತಿದ್ದರು. ಸರ್ಕಾರಕ್ಕೆ ಇದನ್ನು ಸಹಿಸುವುದು ಅಸಾಧ್ಯವಾಗಿಬಿಟ್ಟಿತ್ತು. ಅವರನ್ನು ಬಂಧಿಇ ಜೈಲಿನಲ್ಲಿಡಲಾಗುತ್ತಿತ್ತು. ಗಾಂಧಿ ಜೈಲಿನಲ್ಲಿಯೂ ಅವರ ದಬ್ಬಾಳಿಕೆ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಹಿಂಸೆಯನ್ನು ಪ್ರಚೋದಿಸದೆ ಅಹಿಂಸಾತ್ಮಕ ಮಾರ್ಗದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸುತ್ತಿದ್ದ ಗಾಂಧಿಯವರ ಬಗ್ಗೆ ವಿಶ್ವದೆಲ್ಲೆಡೆ ಗೌರವ ಹೆಚ್ಚುತ್ತಿತ್ತು. ಬ್ರಿಟಿಷ್ ಸರ್ಕಾರಕ್ಕೆ ಗಾಂಧಿಯವರನ್ನು ಜೈಲಿನಲ್ಲಿಟ್ಟರೂ ಕಷ್ಟವಾಗುತ್ತಿತ್ತು. ಹೊರಗೆ ಬಿಟ್ಟರೂ ಕಷ್ಟವಾಗುತ್ತಿತ್ತು. ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಅವರನ್ನು ಬಿಡುಗಡೆ ಮಾಡಿಯೂ ಇತ್ತು. ಬ್ರಿಟಿಷ್ ಸರ್ಕಾರವು ಗಾಂಧಿಯನ್ನು ಕಡೆಗಣಿಸುವುದು ಸಾಧ್ಯವೇ ಇರಲಿಲ್ಲ. ಅವರನ್ನು ಮಾತುಕಕತೆಗಾಗಿ ಲಂಡನ್ನಿಗೆ ಆಹ್ವಾನಿಸಲೇ ಬೇಕಾಗುತ್ತಿತ್ತು.