ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು – ಕಂಠಪೂರ್ತಿ ಕುಡಿದು ಬೀದಿರಂಪ ಮಾಡಿದ ಯುವತಿಯರು

ಮಂಗಳೂರು(ಬೆಂಗಳೂರು): ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು, ಖುಷಿಯಾಗಿದೆ ನಶೆ ಏರಿದೆ ಎಂದು ನಂಜುಂಡಿ ಕಲ್ಯಾಣ ಕನ್ನಡ ಚಿತ್ರದಲ್ಲಿ ನಾಯಕಿ ಮಾಲಾಶ್ರೀ ಹಾಡಿ ಕುಣಿದ ದೃಶ್ಯವನ್ನು ಖಂಡಿತವಾಗಿಯೂ ನೀವು ಮರೆತಿರಲಿಕಿಲ್ಲ. ಒಂದು ವೇಳೆ ಮರೆತಿದ್ದರು ಇದನ್ನು ನೆನಪಿಸುವಂತ ಘಟನೆಯೊಂದು ಬೆಂಗಳೂರಿನಲ್ಲಿ ಅ.19ರಂದು ರಾತ್ರಿ ನಡೆದಿದೆ.

ಬೆಂಗಳೂರಿನ ಕೋರಮಂಗಲದ ಡ್ರಂಕನ್‌ ಡ್ಯಾಡಿ ಪಬ್‌ ನಲ್ಲಿ ಕಂಠಪೂರ್ತಿ ಮದ್ಯ ಹೊಟ್ಟೆಗಿಳಿಸಿ ಮಧ್ಯರಾತ್ರಿ ಕಳೆದು ರಸ್ತೆಗಿಳಿದ ಯುವತಿಯರು ಹೈಡ್ರಾಮಾವನ್ನೇ ಮಾಡಿ ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಓರ್ವಾಕೆ ನಡುರಸ್ತೆಯಲ್ಲಿ ಮಲಗಿಕೊಂಡರೆ, ಇನ್ನೋರ್ವಳು ಕಾರಿನ ಬಾನೆಟ್ ಮೇಲೆ ಕುಳಿತು ಮೈಮರೆತು ಫೋಸ್‌ ನೀಡಿದ್ದಾಳೆ. ಎಣ್ಣೆಯ ಮತ್ತಿನಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ ನಡುರಸ್ತೆಯಲ್ಲಿ ನಡೆಸಿದ ಹುಚ್ಚಾಟ ಸಾರ್ವಜನಿಕರಿಗೆ ಮುಕ್ತ ಮನರಂಜನೆ ನೀಡಿದ್ದಂತು ಸತ್ಯ. ಇದೇ ಕಾರಣಕ್ಕೆ ಮಧ್ಯರಾತ್ರಿಯಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೆಲವರಂತೂ ಇವರ ಮಿತಿಮೀರಿದ ರಂಪಾಟವನ್ನು ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದಾರೆ. ಇನ್ನು ಬುದ್ಧಿವಾದ ಹೇಳಿದವರ ಮೇಲೆ ಹಲ್ಲೆಯ ಪ್ರಯತ್ನವನ್ನು ಯುವತಿಯರು ನಡೆಸಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಇಷ್ಟಾಗುವಾಗ ವಿಷಯ ತಿಳಿದು ಕೋರಮಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಡಿದವರಲ್ಲಿ ಏನು ಮಾತು ಎಂಬಂತೆ ಯುವತಿಯರಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here