ಅ.27ರಂದು ಕರಾವಳಿಯಾದ್ಯಂತ “ಪುಳಿಮುಂಚಿ” – ಪುತ್ತೂರಿನಲ್ಲಿ ಪ್ರೀಮಿಯರ್‌ ಶೋ – ಪುಳಿಮುಂಚಿ ಗೆ ಫಿದಾ ಆದ ಗಣ್ಯರು

ಮಂಗಳೂರು/ಪುತ್ತೂರು: ಅ.27ರಂದು ಕರಾವಳಿಯಾದ್ಯಂತ ಬಹು ನಿರೀಕ್ಷಿತ “ಪುಳಿಮುಂಚಿ” ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ದುಬೈ, ಬೆಹರಿನ್ ನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ತುಳುವರು ಚಿತ್ರವನ್ನು ಮೆಚ್ಚಿದ್ದಾರೆ. ಬುಕ್ ಮೈ ಶೋ ನಲ್ಲಿ ಚಿತ್ರದ ಬುಕಿಂಗ್ ಆರಂಭಗೊಂಡಿದೆ. ಬಿಗ್ ಸಿನಿಮಾಸ್ ಸಹಿತ ಮಲ್ಟಿಫ್ಲೆಕ್ಸ್, ಸಿಂಗಲ್ ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತುಳುವರು ಇಷ್ಟಪಟ್ಟು ಸಿನಿಮಾ ನೋಡುವ ಮೂಲಕ ತುಳು ಸಿನಿಮಾಗಳಿಗೆ ಯಶಸ್ಸು ತಂದುಕೊಡಬೇಕಾಗಿದೆ ಎಂದು ಹೇಳಿದರು.

ಒಂದು ವಾರದಲ್ಲಿ ಚಿತ್ರ ನೋಡುವವರಿಗೆ ಟಿಕೆಟ್ ಮೂಲಕ 2.87 ಲಕ್ಷದ ಸುಜುಕಿ ಜಿಕ್ಸರ್ ಗೆಲ್ಲುವ ಅವಕಾಶವಿದೆ ಎಂದು ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಹೇಳಿದರು. ಚಿತ್ರಕ್ಕೆ ಸಂಗೀತವನ್ನು ಕಿಶೋರ್‌ ಕುಮಾರ್‌ ಶೆಟ್ಟಿ ನೀಡಿದ್ದು ಮಯೂರ್ ಆರ್. ಶೆಟ್ಟಿ ಸಾಹಿತ್ಯ ಮತ್ತು ಚಿತ್ರೀಕರಣ ಸೇರಿದಂತೆ ಹಲವು ಪ್ರತಿಭಾನ್ವಿತ
ಕಲಾವಿದರು ಈ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರದಲ್ಲಿ ಹಾಸ್ಯದಿಗ್ಗಜರ ದಂಡೇ ಇದ್ದು ತುಳು ಚಿತ್ರಪ್ರೇಮಿಗಳಲ್ಲಿ ಪುಳಿಮುಂಚಿ ಹೊಸ ನಿರೀಕ್ಷೆ ಮೂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಹರಿಪ್ರಸಾದ್ ರೈ, ನಿರ್ದೇಶಕ ತ್ರಿಶೂಲ್ ಶೆಟ್ಟಿ, ಕೆಮರಾಮ್ಯಾನ್ ಮಯೂರ್ ಶೆಟ್ಟಿ, ಡಿಬಿಸಿ ಶೇಖರ್, ಪ್ರಜ್ವಲ್, ನಟರಾದ ರಾಹುಲ್ ಅಮೀನ್, ವಿನೀತ್, ಹರೀಶ್ ನಾಯ್ಕ್, ಗಣೇಶ್ ನೀರ್ಚಾಲ್ ಮತ್ತಿತರರು ಉಪಸ್ಥಿತರಿದ್ದರು.

ಈ ನಡುವೆ ಇಂದು(ಅ.21) ಪುತ್ತೂರಿನ ಭಾರತ್‌ ಸಿನಿಮಾಸ್‌ ನಲ್ಲಿ ಪುಳಿಮುಂಚಿ ಚಿತ್ರದ ಪ್ರೀಮಿಯರ್‌ ಶೋ ಪ್ರದರ್ಶನಗೊಂಡಿದ್ದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದೀಪ ಬೆಳಗಿಸಿ ಚಾಲನೆ ನೀಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಚಿತ್ರಕ್ಕೆ ಶುಭ ಹಾರೈಸಿದರು. ಪಂಜಿಗುಡ್ಡೆ ಈಶ್ವರ ಭಟ್, ಚಂದ್ರಹಾಸ ಶೆಟ್ಟಿ, ಶಿವರಾಮ ಆಳ್ವ, ಚಿತ್ರದ ನಿರ್ಮಾಪಕ ಹರಿಪ್ರಸಾದ್ ರೈ, ನಿರ್ದೇಶಕ ತ್ರಿಶೂಲ್ ಶೆಟ್ಟಿ, ಚಿತ್ರದ ನಾಯಕ ನಟ ವಿನೀತ್, ನಟರಾದ ರಾಹುಲ್ ಅಮೀನ್, ರವಿ ರಾಮಕುಂಜ,ಕ್ಯಾಮೆರಾ ಮ್ಯಾನ್ ಮಯೂರ್ ಶೆಟ್ಟಿ, ಡಿಬಿಸಿ ಶೇಖರ್, ಪ್ರಜ್ವಲ್, ಹರೀಶ್ ನಾಯ್ಕ್, ಗಣೇಶ್ ನೀರ್ಚಾಲ್ ಮತ್ತಿತರರು ಉಪಸ್ಥಿತರಿದ್ದರು.

ವಿನೀತ್ ಕುಮಾರ್‌ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿರುವ ಈ ಚಿತ್ರದಲ್ಲಿ  ರಾಹುಲ್ ಅಮೀನ್‌, ಸ್ವರಾಜ್ ಶೆಟ್ಟಿ, ಆರಾಧ್ಯ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಬೈಲೂರು, ಉಮೇಶ್ ಮಿಜಾರ್, ಪಿಂಕಿ ರಾಣಿ, ಸಂತೋಷ್ ಶೆಟ್ಟಿ, ಅದ್ವಿಕಾ ಶೆಟ್ಟಿ ತಾರಾಂಗಣದಲ್ಲಿದ್ದಾರೆ. ಪುಳಿಮುಂಚಿ ತುಳುಚಿತ್ರ ಪ್ರೇಮಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದ್ದು ಚಿತ್ರ ಬಿಡುಗಡೆಗೆ ಕಾಯುವಂತೆ ಮಾಡಿದೆ.

 

 

LEAVE A REPLY

Please enter your comment!
Please enter your name here