ಮಂಗಳೂರು: ಮೇಕಪ್ ಒಂದು ಸೌಂದರ್ಯ ಪ್ರಕ್ರಿಯೆ. ನಗರೀಕರಣ ವಿಸ್ತಾರಗೊಂಡಂತೆ ಜನರ ಜೀವನ ಶೈಲಿಯು ಬದಲಾಗುತ್ತಾ ಹೋಗುತ್ತದೆ. ಲೈಫ್ ಸ್ಟೈಲ್ ಗೆ ಸಂಬಂಧಿಸಿದ ವಸ್ತುಗಳು, ನವ ವಿನ್ಯಾಸದ ಉಡುಗೆ ತೊಡುಗೆಗಳು, ಸೌಂದರ್ಯ ವರ್ದಕಗಳು ಮಾರುಕಟ್ಟೆಯಲ್ಲಿ ತಮ್ಮದೇ ಪಾಲು ಹೊಂದಿದೆ. ಅದರಲ್ಲೂ ಸೌಂದರ್ಯ ವರ್ದಕಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಸಾಗಿದೆ. ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯಿಂದ ಬ್ಯೂಟಿ ಪಾರ್ಲರ್ ಗಳಿಗೆ ಮೊರೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ಜತೆಜತೆಗೆ ಬ್ಯೂಟಿ ಪಾರ್ಲರ್ ಗಳ ಸಂಖ್ಯೆಯೂ ಏರುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಚೇತನಾಸ್ ಬ್ಯೂಟಿ ಲಾಂಜ್ ಮತ್ತು ಎಜುಕೇಶನ್ ಫೌಂಡೇಶನ್.
ಕಂಕನಾಡಿಯ ಬೈಪಾಸ್ ರಸ್ತೆಯ ಕಂಕನಾಡಿ ಗೇಟ್ ನಲ್ಲಿ ಮೊದಲ ಬಾರಿಗೆ ಚೇತನಾಸ್ ಬ್ಯೂಟಿ ಲಾಂಜ್ ನ ಫ್ಯಾಮಿಲಿ ಸೆಲೂನ್ ಮೊದಲ ಬಾರಿಗೆ ಹತ್ತುಹಲವು ವೈಶಿಷ್ಟ್ಯಗಳೊಂದಿಗೆ ನ.5 ರಂದು ಆರಂಭಗೊಂಡಿದೆ. ಇದರೊಂದಿಗೆ ಚೇತನಾಸ್ ಎಜುಕೇಶನ್ ಫೌಂಡೇಶನ್ ಅಕಾಡೆಮಿಯನ್ನು ಆರಂಭಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಎಬಿ ಶೆಟ್ಟಿ ಡೆಂಟಲ್ ಕಾಲೇಜಿನ ಡೀನ್, ಪ್ರೊ.ಡಾ. ಎನ್ ಶ್ರೀಧರ್ ಶೆಟ್ಟಿ ಮತ್ತು ಶ್ರೀಮತಿ ಪದ್ಮನಯನ, ವಸ್ತ್ರಂ ಬ್ಯೂಟಿಕ್ ನ ನಾಗರಾಜ್ ಮತ್ತು ತನ್ವಿ, ಶಕ್ಸ್ ಫಿಟ್ನೆಸ್ ಕ್ಲಬ್ ನ ರಮೀಝ್, ನಟ ನಿರ್ದೇಶಕ ಪ್ರೀತಮ್ ಎಂ ಎಸ್, ಬಾಲಕಲಾವಿದ ಅರುಶ್ ಅತಿಥಿಗಳಾಗಿ ಆಗಮಿಸಿ ನೂತನ ಸಂಸ್ಥೆಗೆ ಶುಭಕೋರಿದರು.
ಕಳೆದ 27 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದು, ದೇಶ ವಿದೇಶಗಳಲ್ಲಿ ಹಲವು ತರಬೇತಿಗಳನ್ನು ಪಡೆದುಕೊಂಡು ಬಂದಿದ್ದು ಜನತೆಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಪಾರ್ಲರ್ ಆರಂಭಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಬಿಎ ಸೈಕಾಲಜಿ ಪದವಿದರೆಯಾಗಿರುವ ಚೇತನಾ ಸಾಲಿಯಾನ್ ತಿಳಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ಆಗಿರುವುದರ ಜೊತೆಗೆ 2013ರಲ್ಲಿ ಬ್ಯೂಟಿ ಕಾಸ್ಮೆಟಾಲಜಿಸ್ಟ್ ಜ್ಯೂರಿಸ್ ಎಕ್ಷಾಮಿನೇಶನ್ ಪಾಸ್ ಮಾಡಿ ಕಾಸ್ಮೆಟಿಕ್ ಟ್ರೀಟ್ಮೆಂಟ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದು ಬ್ರೈಡ್, ಗ್ರೂಮ್ ಗಳಿಗೆ ಸೇವೆ ಒದಗಿಸಬೇಕೆನ್ನುವ ಬಹಳ ಸಮಯದ ಬೇಡಿಕೆಯನ್ನು ಪೂರೈಸಲು ಇದನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ನಾವು ಕಲಿಯಬೇಕು ಇನ್ನೊಬ್ಬರಿಗೆ ಕಲಿಸಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ. ಇದಕ್ಕಾಗಿ ಅಕಾಡೆಮಿಯನ್ನು ಆರಂಭಿಸಿದ್ದು ಬ್ಯೂಟಿ ಇಂಡಸ್ಟ್ರಿಗೆ ಸಂಬಂಧಿಸಿದ ಮೇಕಪ್ ಸ್ಕಿನ್ ಮೈಕ್ರೋ ಬ್ಲೇಡಿಂಗ್, ನೈಲ್ ಆರ್ಟ್, ಹೇರ್ ಎಕ್ಸ್ಟೆನ್ಷನ್ ಹೀಗೆ ವಿವಿದ ಬಗೆಯ ಕೋರ್ಸ್ ಗಳು ಲಭ್ಯವಿರುವುದದಾಗಿ ಚೇತನಾ ಮಾಹಿತಿ ನೀಡಿದ್ದಾರೆ.