ಮಂಗಳೂರು: ಉದ್ಯಮ ಸಾಥಿ ಉಪಕ್ರಮದಡಿಯಲ್ಲಿ ಉದ್ಯಮ ಶೀಲತೆಯ ಮನೋಭಾವವನ್ನು ಉತ್ತೇಜಿಸಲು ಹಾಗೂ ಮಂಗಳೂರು ಮತ್ತು ಉಡುಪಿ ಡಯಾಸಿಸ್ ನ ಕ್ಯಾಥೋಲಿಕ್ ಸಮುದಾಯದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಶಾರ್ಕ್ ಟ್ಯಾಂಕ್ ಇಂಡಿಯಾ ಮಾದರಿಯಲ್ಲಿ ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಐಡಿಯಾಥಾನ್-2023 ಕಾರ್ಯಕ್ರಮವನ್ನು ಆಯೋಜಿಸಿದೆ. ದ.ಕ ಮತ್ತು ಉಡುಪಿ ಧರ್ಮಪ್ರಾಂತ್ಯದ ಕ್ಯಾಥೋಲಿಕ್ ಸಮುದಾಯದ ಆಸಕ್ತ ಅಭ್ಯರ್ಥಿಗಳು ನ.15ಕ್ಕೆ ಮುಂಚಿತವಾಗಿ <https://bit.ly/Udayam-Saathi-Ideathon-2023> ಈ ಲಿಂಕನ್ನು ಬಳಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ವ್ಯಾಪಾರ ಪ್ರಸ್ತಾಪವನ್ನು ಸಿದ್ಧಪಡಿಸುವ ಟೆಂಪ್ಲೆಟ್ <https://bit.ly/Ideathon-Template> ಇಲ್ಲಿ ಲಭ್ಯವಿದೆ.
ಐಡಿಯಾಥಾನ್ ವಿಜೇತರಿಗೆ ನಗದು ಬಹುಮಾನ ಸೇರಿದಂತೆ ಎಸ್ ಜೆ ಇ ಸಿ ಯಲ್ಲಿ ಮೊದಲ ಅವಕಾಶ ನೀಡಲಾಗುವುದು. ವಿಜೇತರು ಹೂಡಿಕೆದಾರರಿಗೆ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸಲು ಅವಕಾಶಗಳನ್ನು ಒದಗಿಸಲಾಗುತ್ತದೆ ಎಂದು ಆಯೋಜಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.