ಗುರುವಾಯೂರ್ ದೇವಸ್ವಂ ಆನೆ ಶಿಬಿರದಲ್ಲಿ ಘಟನೆ – ಮಾವುತನನ್ನು ತುಳಿದು‌ ಕೊಂದ ಗಜರಾಜ – 28 ವರ್ಷಗಳಿಂದ ಸರಪಳಿ ಬಂಧನದಲ್ಲಿರುವ ಮದಗಜ

ಮಂಗಳೂರು(ತ್ರಿಶೂರ್): ಕೇರಳದ ಗುರುವಾಯೂರ್ ದೇವಸ್ವಂನ ಆನೆ ಶಿಬಿರದಲ್ಲಿ ನ.8ರಂದು ಮಾವುತನೊಬ್ಬ ಆನೆ ತುಳಿತಕ್ಕೊಳಗಾಗಿ ಮೃತಪಟ್ಟಿದ್ದಾನೆ. 36 ವರ್ಷದ ಮಾವುತನನ್ನು ಚಂದ್ರಶೇಖರನ್ ಹೆಸರಿನ ಆನೆ ತುಳಿದು, ಬಳಿಕ ದಂತದಿಂದ ಆತನನ್ನು ಇರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಾವುತನನ್ನು ಎ ಆರ್‌ ರತೀಶ್‌ ಎಂದು ಗುರುತಿಸಲಾಗಿದೆ.

ಮುಖ್ಯ ಮಾವುತ ರಜೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಆತನ ಬದಲಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಹ ಮಾವುತ ರತೀಶ್ ಆನೆ ಆಕ್ರೋಶಕ್ಕೆ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಮಾವುತನನ್ನು ಹತ್ಯೆ ಮಾಡಿರುವ ಆನೆ ಸ್ವಭಾವತಃ ಆಕ್ರಮಣಕಾರಿಯಾಗಿದ್ದರಿಂದ ಕಳೆದ 28 ವರ್ಷಗಳಿಂದ ಸರಪಳಿಯಲ್ಲಿ ಬಂಧಿಸಲಾಗಿತ್ತು ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ಆನೆ ಶಿಬಿರವನ್ನು ಗುರುವಾಯೂರ್ ದೇವಾಲಯದ ಆಡಳಿತ ನಿರ್ವಹಿಸುತ್ತಿದ್ದು, ಪ್ರಸ್ತುತ ಚಂದ್ರಶೇಖರನ್ ಆನೆ ಸೇರಿದಂತೆ ಸುಮಾರು 60 ಆನೆಗಳು ಇಲ್ಲಿದೆ.

LEAVE A REPLY

Please enter your comment!
Please enter your name here