ಉಡುಪಿ ನಾಲ್ವರ ಹತ್ಯೆ ಪ್ರಕರಣ-ಸ್ಥಳ ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನಿಸಿದ ಆಕ್ರೋಶಿತರ ಗುಂಪು- ಪೊಲೀಸರಿಂದ ಲಾಠಿಚಾರ್ಜ್-ಆಕ್ರೋಶಿತರಿಂದ ರಸ್ತೆ ತಡೆ

ಮಂಗಳೂರು(ಉಡುಪಿ): ಉಡುಪಿಯ ನೇಜಾರು ತೃಪ್ತಿ ಲೇಔಟ್‌ ನಲ್ಲಿ ನಡೆದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಪೊಲೀಸರು ಸ್ಥಳ ಮಹಜರು ನಡೆಸಲು ಕರೆ ತಂದ ವೇಳೆ ಸ್ಥಳದಲ್ಲಿ ಸೇರಿದ್ದ ಆಕ್ರೋಶಿತರ ಗುಂಪು ಆರೋಪಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮಹಜರು ನಡೆಸುವ ವೇಳೆ ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದ್ದ ಆಕ್ರೋಶಿತ ಗುಂಪು, ಆತನಿಗೆ ಬದುಕುವ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ವಾಪಾಸು ಕರೆದುಕೊಂಡು ಹೋಗುವ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಆಕ್ರೋಶಿತರ ಗುಂಪು ಆರೋಪಿಯ ಮೇಲೆ ದಾಳಿಗೆ ಯತ್ನಿಸಿದೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಬಳಿಕ ಆಕ್ರೋಶಿತ ಗುಂಪು ಲಾಠಿ ಚಾರ್ಜ್ ಖಂಡಿಸಿ ರಸ್ತೆ ತಡೆ ನಡೆಸಿದರು.

 

 

 

 

 

 

 

LEAVE A REPLY

Please enter your comment!
Please enter your name here