ಮಂಗಳೂರು(ಸುಳ್ಯ): ನಿತ್ಯಜೀವನದಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಿರುತ್ತದೆ. ಇದೆಲ್ಲವನ್ನು ಕಣ್ಣಾರೆ ಕಂಡರೆ ಮಾತ್ರ ನಮಗೆ ನಂಬಿಕೆ ಹುಟ್ಟುತ್ತದೆ. ದಕ್ಷಿಣದ ರಾಮೇಶ್ವರದಲ್ಲಿ 15 ಕೆ.ಜಿ ಭಾರದ ಕಲ್ಲು ನೀರಿನಲ್ಲಿ ತೇಲುತ್ತಿರುವ ಘಟನೆ ನಮ್ಮ ಕಣ್ಣಮುಂದಿರುವಂತೆಯೇ ಸುಳ್ಯದ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಚಿತ್ರವಾದ ಈ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ.
ಜಲ್ಲಿ ಕಲ್ಲೊಂದು ಗಾಳಿಯಲ್ಲಿ ತೇಲಿದ ಘಟನೆ ನಡೆದಿದ್ದು, ಕಾಲೇಜು ವಿದ್ಯಾರ್ಥಿನಿಯೋರ್ವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ತಂಟೆಪ್ಪಾಡಿ ಪುಟ್ಟಣ್ಣ ಗೌಡ ಅವರ ಪುತ್ರಿ ಧನುಶ್ರೀ ಕೆಲವು ದಿನಗಳ ಹಿಂದೆ ಬೆಳಗ್ಗೆ 7 ಗಂಟೆ ಸುಮಾರಿಗೆ ಪುತ್ತೂರಿನ ಕಾಲೇಜಿಗೆಂದು ತೆರಳುತ್ತಿರುವಾಗ ರಸ್ತೆಯಲ್ಲಿ ಜಲ್ಲಿ ಕಲ್ಲೊಂದು ತೇಲಾಡುವ ದೃಶ್ಯ ಕಂಡು ಬಂದಿದೆ. ಕೂಡಲೇ ಆಕೆ ಈ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಕೆಲವು ಸೆಕುಂಡುಗಳಷ್ಟೇ ಹಾರಾಡಿದೆ ಕಲ್ಲು ಮತ್ತೆ ರಸ್ತೆಗೆ ಬಿದ್ದಿದೆ ಎಂದು ಆಕೆ ಸುದ್ದಿಗೆ ಮಾಹಿತಿ ನೀಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆಯ ಸಾಧ್ಯಾಸಾಧ್ಯತೆಯ ಬಗ್ಗೆ ಚರ್ಚೆ ಶುರುವಾಗಿದೆ.
ವಿಡೀಯೋಗಾಗಿ ಇಲ್ಲಿ ಕ್ಲಿಕ್ ಮಾಡಿ