ಮಂಗಳೂರು(ನವದೆಹಲಿ): ಇಂದು ಲೋಕಸಭಾ ಸಂಸತ್ ಕಲಾಪದ ವೇಳೆಯಲ್ಲಿ ಭಾರೀ ಭದ್ರತಾ ಲೋಪ ಕಂಡು ಬಂದಿದೆ. ಲೋಕಸಭೆ ಕಲಾಪದ ವೇಳೆಯಲ್ಲೇ ನುಗ್ಗಿದಂತ ಮೂವರು ಬಂಧಿತ ಆರೋಪಿಗಳ ಪೈಕಿ ಇಬ್ಬರು ಕರ್ನಾಟಕದ ಮೈಸೂರಿನ ಮನೋರಂಜನ್ ಮತ್ತು ಸಾಗರ್ ಶರ್ಮಾ ಎಂದು ತಿಳಿದು ಬಂದಿದೆ.
ಈ ಪೈಕಿ ಮನೋರಂಜನ್ ಇಂಜಿನಿಯರ್ ಆಗಿದ್ದಾನೆ. ಸಾಗರ್ ಶರ್ಮಾ ಮೈಸೂರಿನ ವಿಜಯನಗರದ ನಿವಾಸಿಯಾಗಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಎಂಬುದಾಗಿ ತಿಳಿದು ಬಂದಿದೆ. ಇದಲ್ಲದೇ ಸಂಸತ್ ಭವನದ ಹೊರಗಡೆ ಪ್ರತಿಭಟಿಸುತ್ತಿದ್ದ ನೀಲಂ ಕೌರ್ ಎಂಬ ಯುವತಿ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರೇಕ್ಷಕರ ಗ್ಯಾಲರಿಗೆ ಪಾಸ್ ನೀಡುವುದನ್ನು ನಿಷೇಧಿಸಿದ್ದಾರೆ. ಸಿ ಆರ್ ಪಿ ಎಫ್ ಡಿಜಿ ಅನೀಶ್ ದಯಾಳ್ ಸಿಂಗ್ ಸಂಸತ್ ಭವನಕ್ಕೆ ಭೇಟಿ ನೀಡಿದ್ದು ಭದ್ರತಾ ಲೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#WATCH | Delhi: Two protestors, a man and a woman have been detained by Police in front of Transport Bhawan who were protesting with colour smoke. The incident took place outside the Parliament: Delhi Police pic.twitter.com/EZAdULMliz
— ANI (@ANI) December 13, 2023
RARE SHOW OF UNITY
Intruders were beaten up by MPs from all parties. pic.twitter.com/aoZ8lO4GZl
— News Arena India (@NewsArenaIndia) December 13, 2023