



ಮಂಗಳೂರು: ಸರಕಾರಿ ಪೋರ್ಟಲ್ ಮೂಲಕ ಆಧಾರ್ ನವೀಕರಣದ ಗಡುವನ್ನು ವಿಸ್ತರಿಸಲಾಗಿದೆ. ಮೈ ಆಧಾರ್ ಪೋರ್ಟಲ್ ಮೂಲಕ ತಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಡಿ. 15ರಿಂದ 2024ರ ಮಾರ್ಚ್ 14ರವರೆಗೆ ಅವಧಿ ವಿಸ್ತರಿಸಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಗಡುವು ವಿಸ್ತರಿಸುವಂತೆ ಸಾರ್ವಜನಿಕರಿಂದ ಬಂದ ಮನವಿಯ ಹಿನ್ನೆಲೆಯಲ್ಲಿ ನವೀಕರಿಸುವ ಅವಧಿಯನ್ನು 3 ತಿಂಗಳ ವರೆಗೆ ಮುಂದುವರಿಸಿದೆ.



















