ಮಂಗಳೂರು: ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕೆ ತಮಿಳುನಾಡಿನಿಂದ ಬ್ರಹತ್ ಗಂಟೆಗಳನ್ನು ರವಾನಿಸಲಾಗಿದೆ. ಒಂದೊಂದು ಗಂಟೆ ತಲಾ 2 ಟನ್ ತೂಕವಿದ್ದು, ಒಟ್ಟು 42 ಗಂಟೆಗಳು ರಾಮ ಮಂದಿರಕ್ಕೆ ತಲುಪಲಿವೆ.
ಈ ಬ್ರಹತ್ ಗಂಟೆಗಳನ್ನು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ತಯಾರಿಸಲಾಗಿದ್ದು, ವಿಶೇಷ ಪೂಜೆಯ ನಂತರ ಒಟ್ಟು 42 ಗಂಟೆಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಮತ್ತೊಂದೆಡೆ ಲಖನೌದ ತರಕಾರಿ ಮಾರಾಟಗಾರ ಅನಿಲ್ ಕುಮಾರ್ ಸಾಹು ಎಂಬಾತ ಅಯೋಧ್ಯೆಯ ರಾಮ ಮಂದಿರಕ್ಕೆ ಏಕಕಾಲಕ್ಕೆ 9 ದೇಶಗಳ ಸಮಯವನ್ನು ತೋರಿಸುವ ವಿಶಿಷ್ಟ ಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದಾರೆ.