ತಮಿಳುನಾಡು – ಮಂಗಳೂರು – ಅಯೋಧ್ಯೆ ರೈಲು ಸಂಚಾರ ಪ್ರಾರಂಭ

ಮಂಗಳೂರು: ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯಮತ್ತೂರು-ದರ್ಶನ ನಗರ್‌-ಕೊಯಮತ್ತೂರು ಆಸ್ತಾ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ. ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಫೆ.8 ರಂದು ಹೊರಡಲಿದ್ದು, ಮಂಗಳೂರು ಜಂಕ್ಷನ್‌ ನಿಲ್ದಾಣದ ಮೂಲಕ ಅಯೋಧ್ಯೆಗೆ ತೆರಳಲಿದೆ.

ಫೆ. 8ರ ಸಂಜೆ 5.50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ, 6ಕ್ಕೆ ತೆರಳುವ ಈ ರೈಲು ಫೆ.11ರಂದು ಮುಂಜಾನೆ ಅಯೋಧ್ಯೆಯ ದರ್ಶನ್‌ನಗರ ನಿಲ್ದಾಣ ತಲುಪಲಿದೆ. ಫೆ. 12ರಂದು ಬೆಳಗ್ಗೆ 8ಕ್ಕೆ ಅಯೋಧ್ಯೆಯಿಂದ ಹೊರಟು ಫೆ. 14ರ ಸಂಜೆ ಮಂಗಳೂರು ಜಂಕ್ಷನ್‌ ತಲುಪಲಿದೆ.

LEAVE A REPLY

Please enter your comment!
Please enter your name here