ಮಿಸ್ ಟೀನ್ ಇಂಡಿಯಾ ಸೌಂದರ್ಯ ಸ್ಪರ್ಧೆಗೆ ಮಂಗಳೂರಿನ ಇಶಿಕಾ ಶರತ್ ಶೆಟ್ಟಿ ಆಯ್ಕೆ

ಮಂಗಳೂರು: ಹರಿಯಾಣದ ಗುರುಗ್ರಾಮದಲ್ಲಿ ನಡೆಯುತ್ತಿರುವ ಮಿಸ್ ಟೀನ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಮಿಸ್ ಟೀನ್ ಇಂಡಿಯಾ ಬ್ಯೂಟಿ ಹಾಗೂ ಮಿಸ್ ಟೀನ್ ಟ್ಯಾಲೆಂಟ್ ಇಂಡಿಯಾ ಸ್ಪರ್ಧೆಗೆ ಮಂಗಳೂರಿನ ಇಶಿಕಾ ಶರತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇಶಿಕಾ ಈ ಹಿಂದೆ ಬೆಂಗಳೂರಿನಲ್ಲಿ N B ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ ಮಿಸ್ಟರ್, ಮಿಸ್ ಟೀನ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ವಿಭಾಗದಲ್ಲಿ ಮೊದಲ ರನ್ನರ್ ಅಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅದಲ್ಲದೆ ಮಿಸ್ ಟೀನ್ ಟ್ಯಾಲೆಂಟೆಡ್ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಕಾವೂರು ನಿವಾಸಿ ಶರತ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಗಳ ಪುತ್ರಿ ಇಶಿಕಾ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here