ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್-ವಿದ್ಯುತ್ ದರ ಇಳಿಕೆ ಮಾಡಿ ಸರಕಾರ ಆದೇಶ

ಮಂಗಳೂರು(ಬೆಂಗಳೂರು): ಹೊಸ ದರ ಪರಿಷ್ಕರಣೆ ಮಾಡಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಇಳಿಕೆ ಮಾಡಿ ಇಂದು(ಫೆ.28) ಆದೇಶ ಹೊರಡಿಸಿದೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್​ ನೀಡಿ, ಗ್ರಾಹಕರಿಗೆ ಬಂಪರ್​ ಕೊಡುಗೆ ನೀಡಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ಅದೇ ರೀತಿಯಾಗಿ ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್​ಗೆ 40 ಪೈಸೆ ಕಡಿತ ಮಾಡಲಾಗಿದ್ದು, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್​ 1ರಿಂದಲೇ ಅನ್ವಯವಾಗಲಿದೆ.

ವಿದ್ಯುತ್ ದರ ಇಳಿಕೆಯ ಮಾಹಿತಿ ಹೀಗಿದೆ
ಎಲ್‌ಟಿ ಡೊಮೆಸ್ಟಿಕ್ ಲೈಟಿಂಗ್: 100 ಯೂನಿಟ್‌ಗಿಂತ ಹೆಚ್ಚಿನ ಬಳಕೆಗಾಗಿ ಪ್ರತಿ ಯೂನಿಟ್‌ಗೆ 110 ಪೈಸೆ ಕಡಿಮೆ ಮಾಡಲಾಗಿದೆ.
ಹೆಚ್​ಟಿ ಕಮರ್ಷಿಯಲ್: ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 1 ರೂ. 25 ಪೈಸೆ ಕಡಿಮೆ ಮಾಡಲಾಗಿದೆ. ಅಂದರೆ ಬೇಡಿಕೆಯ ಶುಲ್ಕಗಳ ಪ್ರತಿ ಕೆವಿಎಗೆ ರೂ.10 ರಷ್ಟು ಕಡಿಮೆ ಮಾಡಲಾಗಿದೆ.
ಹೆಚ್​ಟಿ ಇಂಡಸ್ಟ್ರಿಯಲ್: ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳ ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಿದೆ.
ಹೆಚ್​ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 40 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳು ಪ್ರತಿ ರೂ.10 ರಷ್ಟು ಕಡಿಮೆಯಾಗಿದೆ.
ಹೆಚ್​ಟಿ ಖಾಸಗಿ ಏತ ನೀರಾವರಿ: ಪ್ರತಿ ಯೂನಿಟ್‌ಗೆ 200 ಪೈಸೆ ಕಡಿಮೆಯಾಗಿದೆ.
ಹೆಚ್​ಟಿ ವಸತಿ ಅಪಾರ್ಟ್‌ಮೆಂಟ್‌ಗಳು: ಪ್ರತಿ ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಿದೆ.
ಎಲ್​​ಟಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ.
ಎಲ್​ಟಿ ಕೈಗಾರಿಕಾ ಸ್ಥಾಪನೆಗಳು: ಪ್ರತಿ ಘಟಕಕ್ಕೆ 100 ಪೈಸೆ ಕಡಿಮೆ ಮಾಡಲಾಗಿದೆ.
ಎಲ್​ಟಿ ವಾಣಿಜ್ಯ ಸ್ಥಾಪನೆಗಳು: ಪ್ರತಿ ಯೂನಿಟ್‌ಗೆ 50 ರಷ್ಟು ಕಡಿಮೆಯಾಗಿದೆ.

LEAVE A REPLY

Please enter your comment!
Please enter your name here