ಮಂಗಳೂರು: ಡಿಜಿಟಲ್ ದಾಖಲಾತಿ ಕೆವೈಸಿ ವಿಚಾರದಲ್ಲಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ.
ಆದರೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಹಣವಿದ್ದರೆ ಅದು ಖಾಲಿಯಾಗುವವರೆಗೆ ಬಳಸಬಹುದು. ಆದರೆ, ಅವುಗಳಿಗೆ ಮತ್ತೆ ರೀಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್‌ಬಿಐ ಆದೇಶ ನೀಡಿ ನಂತರ ಮಾರ್ಚ್ 14ರವರೆಗೂ ವಿಸ್ತರಿಸಿತ್ತು. ಪೇಟಿಎಂ ಬಳಕೆದಾರರು ಕಳುಹಿಸುವ ಹಣದ ವ್ಯವಹಾರ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತದೆ. ಹೀಗಾಗಿ ಪೇಟಿಎಂ ಸೇವೆ ಮುಂದುವರೆಯುತ್ತದೆ. ಇದುವರೆಗೆ ಪೇಟಿಎಂ ಆ್ಯಪ್ ಸೇವೆ ನಿರ್ಬಂಧಕ್ಕೆ ಒಳಗಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ನಡೆಯುತ್ತಿತ್ತು. ಈಗ ಯೆಸ್ ಬ್ಯಾಂಕ್ ಮೂಲಕ ನಡೆಯಲಿದ್ದು, ಪೇಟಿಎಂ ಯುಪಿಐ ಸೇವೆ ಮುಂದುವರೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತರ ಮೂರು ಬ್ಯಾಂಕ್ ಗಳ ಮೂಲಕ ಯುಪಿಐ ಅನ್ನು ಮುಂದುವರಿಸಲು ಪೇಟಿಎಂ ಅನುಮೋದನೆ ಪಡೆದಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾ.14ರಂದು One97 ಕಮ್ಯುನಿಕೇಷನ್ಸ್ ಬ್ರ್ಯಾಂಡ್ ಪೇಟಿಎಂ ಅನ್ನು ನಿರ್ವಹಿಸುತ್ತದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ನಲ್ಲಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರರಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.