ಮಂಗಳೂರು(ಬ್ರಹ್ಮಾವರ): ಹೇರೂರು ಮಡಿಸಾಲು ಹೊಳೆಯಲ್ಲಿ ವ್ಯಕ್ತಿಯೊಬ್ಬರು ಈಜುವಾಗ ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಮುಳುಗುತಜ್ಞ ಈಶ್ವರ್ ಮಲ್ಪೆ ಹುಡುಕಿ ಕೊಟ್ಟಿದ್ದಾರೆ.
ರವಿವಾರ ಮಧ್ಯಾಹ್ನ ತೂಗು ಸೇತುವೆ ಬಳಿ ನಾಲ್ವರು ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭ ಒಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳೆದುಹೋಗಿತ್ತು. ತತ್‌ಕ್ಷಣ ಆಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿ ವಿನಂತಿಸಿದ ಮೇರೆಗೆ ನೀರಿನಾಳದಲ್ಲಿ ಕಾರ್ಯಾಚರಣೆ ನಡೆಸಿ ಸರ ಹುಡುಕಿ ತಂದು ಮರಳಿಸಿದ್ದಾರೆ. ಈ ಹಿಂದೆ ಕೂಡ ಈಶ್ವರ್ ಮಲ್ಪೆ ನೀರಿಗೆ ಬಿದ್ದಿದ್ದ ಚಿನ್ನಾಭರಣ ಹುಡುಕಿಕೊಟ್ಟಿದ್ದರು. ಈಶ್ವರ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸರ ಮರಳಿ ಪಡೆದವರು ಕೃತಜ್ಞತೆ ಸಲ್ಲಿಸಿದ್ದಾರೆ.