ದೆಹಲಿಯ ರಾಜ್​ಪುರ್​​ನಲ್ಲಿ ಕಚೋರಿ ಅಂಗಡಿಗೆ ನುಗ್ಗಿದ ಕಾರು-ವೀಡಿಯೋ ವೈರಲ್

ಮಂಗಳೂರು(ನವದೆಹಲಿ): ವೇಗವಾಗಿ ಬಂದ ಕಾರೊಂದು ಕಚೋರಿ ಅಂಗಡಿಯೊಂದಕ್ಕೆ ನುಗ್ಗಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ದೆಹಲಿಯ ರಾಜ್​ಪುರ್​​ನಲ್ಲಿ ನಡೆದಿದೆ.

ದೆಹಲಿಯ ರಾಜ್‌ಪುರ ರಸ್ತೆಯ ಸಿವಿಲ್ ಲೈನ್‌ನಲ್ಲಿರುವ ಫತೇ ಕಿ ಕಚೋರಿ ಅಂಗಡಿಗೆ ನುಗ್ಗಿದೆ. ಅಂಗಡಿಯಲ್ಲಿ ಕೆಲವು ಮಂದಿ ಗ್ರಾಹಕರು ಕಚೋರಿ ತಿನ್ನುತ್ತಿದ್ದ ವೇಳೆ ಅತಿವೇಗದಿಂದ ಬಂದ ಕಾರು ಒಳಗಿದ್ದ ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕೆಲವರು ಅಂಗಡಿಯ ಇಕ್ಕೆಲಗಳಲ್ಲಿ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಸಾವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here