ಚುನಾವಣೆಗೂ ಮೊದಲೇ ಖಾತೆ ತೆರೆದ ಬಿಜೆಪಿ – ಸೂರತ್‌ ಬಿಜೆಪಿ ಅಭ್ಯರ್ಥಿ ಮುಕೇಶ್‌ ದಲಾಲ್‌ ಅವಿರೋಧ ಆಯ್ಕೆ

ಮಂಗಳೂರು/ಹೊಸದಿಲ್ಲಿ:  ಗುಜರಾತ್‌ನ ಸೂರತ್‌ ಕ್ಷೇತ್ರದಿಂದ ಬಿಜೆಪಿಯ ಮುಕೇಶ್‌ ದಲಾಲ್‌ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದ್ದು, ಚುನಾವಣಾಧಿಕಾರಿಗಳು ವಿಜೇತರ ಪ್ರಮಾಣಪತ್ರ ನೀಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ನಿಲೇಶ್‌ ಕುಂಭಾನಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದು, ಉಳಿದ ಎಲ್ಲಾ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಹೊರತಾಗಿ ಬಹುಜನ ಸಮಾಜದ ಪ್ಯಾರೆಲಾಲ್‌ ಭಾರತಿ ಸಹಿತ ಎಂಟು ಮಂದಿ ಅಭ್ಯರ್ಥಿಗಳಿದ್ದರು. ಸಾಕ್ಷಿಗಳ ಸಹಿ ನಕಲಿ ಸಹಿಯಂತೆ ಕಂಡುಬಂದಿದ್ದು, ರವಿವಾರ ಚುನಾವಣಾಧಿಕಾರಿ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದ್ದರು. ಈ ಮೂಲಕ ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆಗೂ ಮೊದಲು ಖಾತೆ ತೆರೆದಿದೆ.

LEAVE A REPLY

Please enter your comment!
Please enter your name here