ಮಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಗ್ಯಾರಂಟಿ ನೀಡ್ತಾ ಇದೆ. ಆದ್ರೆ ಇಲ್ಲಿ ಹಿಂದೂ ಭಾವನೆಗಳಿಗೆ ಯಾವುದೇ ಗ್ಯಾರಂಟಿ ಇಲ್ಲ. ಸ್ತ್ರೀ ಭಾವನೆಗಳಿಗೂ ಯಾವುದೇ ಗ್ಯಾರಂಟಿ ಇಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ವೈ ಭರತ್ ಶೆಟ್ಟಿ, ರಾಜ್ಯ ಸರಕಾರದಿಂದ ತುಷ್ಟಿಕರಣ ನೀತಿ ಮಾತ್ರ ಆಗ್ತಾ ಇದೆ. ಒಂದು ವರ್ಗದ ಓಲೈಕೆಯಲ್ಲಿ ಸರ್ಕಾರ ತೊಡಗಿದೆ. ಓಟ್ ಬ್ಯಾಂಕ್ ರಾಜಕೀಯವನ್ನು ಸರ್ಕಾರ ಮಾಡುತ್ತಿದೆ. ಕಾರ್ಪೋರೇಟರ್ ಮಗಳ ಹತ್ಯೆ ಆದ್ರೂ ಮನೆಗೆ ಸಿಎಂ ಹೋಗಿಲ್ಲ. ಸಿಎಂ ಹೋದ್ರೆ ಮುಸ್ಲಿಂ ಮತ ಹೋಗುತ್ತೆ ಎಂಬ ಭಯ. ಸಿದ್ದರಾಮಯ್ಯ ಸರ್ಕಾರ ಇಂತವರಿಗೆ ಸ್ಥೈರ್ಯ ನೀಡುತ್ತಿದ್ದು, ಈ ರೀತಿಯ ಕೃತ್ಯ ಆಗುತ್ತಿದೆ. ಮಡಿಕೇರಿಯಲ್ಲಿ ಯುವಕನ ಕೊಲೆಯ ಬಗ್ಗೆ ಕ್ರಮ ಆಗಿಲ್ಲ. ಅಲ್ಪಸಂಖ್ಯಾತ ಎಂದಾಗ ರಾಜಕೀಯ ಲಾಭ ನಷ್ಟ ಲೆಕ್ಕಾಚಾರ ಮಾಡ್ತಾರೆ ಎಂದು ಸರಕಾರವನ್ನು ಟೀಕಿಸಿದ್ದಾರೆ.