ಮಂಗಳೂರು: ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಆರೋಪಿ ಪವನ್ ಎಂಬಾತನಿಗೆ ಚೂರಿಯಿಂದ ಇರಿದ ಘಟನೆ ಫರಂಗಿಪೇಟೆಯ ಕುಮ್ಡೇಲುವಿನಲ್ಲಿ ಇಂದು(ಏ.26) ನಡೆದಿದೆ.
ಎಸ್ಡಿಪಿಐ ಸದಸ್ಯ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಪವನ್ ಮೂರನೇ ಆರೋಪಿಯಾಗಿದ್ದ. ರೌಡಿ ಶೀಟರ್ ಆಗಿರುವ ಪವನ್ಗೆ ಮತ್ತೋರ್ವ ರೌಡಿಶೀಟರ್ ಚರಣ್ ಎಂಬಾತ ಚೂರಿಯಿಂದ ಇರಿದಿದ್ದಾನೆ. ಗಾಂಜಾ ವ್ಯಸನಿಯಾಗಿರುವ ಚರಣ್, ಪವನ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ಪವನ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪವನ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಚರಣ್ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.