ನವದೆಹಲಿ/ಮಂಗಳೂರು: ಎಲೆಕ್ಟ್ರಾನಿಕ್ ಮತದಾನ ಯಂತ್ರವನ್ನು (ಇವಿಎಂ) ಯಾರು ಬೇಕಾದರೂ ಹ್ಯಾಕ್ ಮಾಡಬಹುದು ಮತ್ತು ಅದನ್ನು ತೆಗೆದುಹಾಕಬೇಕಾಗಿದೆ ಎಂದು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ, ಆಘಾತಕಾರಿ ಹೇಳಿಕೆಯೋಂದನ್ನು ನೀಡಿದ್ದಾರೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಇವಿಎಂಗಳನ್ನು ಹ್ಯಾಕ್ ಮಾಡಬಹುದಾಗಿದೆ ಎಂದಿದ್ದಾರೆ. ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಪೋಸ್ಟ್ಗೆ ಬೆಂಬಲ ಸೂಚಿಸಿ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅವರು ಯುಎಸ್ ಚುನಾವಣೆಯಿಂದ ಇವಿಎಂಗಳನ್ನು ತೆಗೆದುಹಾಕಬೇಕೆಂದು ಟ್ವೀಟರ್ ನಲ್ಲಿ ಅವರು ಒತ್ತಾಯಿಸಿದ್ದಾರೆ.
We should eliminate electronic voting machines. The risk of being hacked by humans or AI, while small, is still too high. https://t.co/PHzJsoXpLh
— Elon Musk (@elonmusk) June 15, 2024
ಈ ಸಮಸ್ಯೆಗೆ ಒಂದೇ ಒಂದು ಪರಿಹಾರವಿದೆ ಮತ್ತು ಅದು ನಾವು ಕಾಗದದ ಮತಪತ್ರಗಳಿಗೆ ಮರಳಬೇಕು ಎಂದು ಕೆನಡಿ ಹೇಳಿದ ಪೋಸ್ಟ್ ಗೆ ಬೆಂಬಲಿಸಿದ ಮಸ್ಕ್, ನಾವು ಈಗ ಇವಿಎಂಗಳನ್ನು ತಪ್ಪಿಸಬೇಕು ಮತ್ತು ಅದನ್ನು ತೊಡೆದುಹಾಕಬೇಕಾಗಿದೆ. ಅದು ಮಾನವರಾಗಿರಲಿ ಅಥವಾ ಎಐ ಆಗಿರಲಿ, ಇವಿಎಂಗಳನ್ನು ಹ್ಯಾಕ್ ಮಾಡುವ ಅಪಾಯವು ಹೆಚ್ಚಿದೆ ಎಂದು ಅವರು ಹೇಳಿದರು.