ಪಿಡಬ್ಲ್ಯುಡಿ ಕಂಟ್ರಾಕ್ಟರ್ ಕೋಟ್ಯಾನ್ ಮನೆ ದರೋಡೆ ಪ್ರಕರಣ – ಗ್ರಾಮ ಪಂಚಾಯತಿ ಸದಸ್ಯನ ಸಹಿತ 10 ಮಂದಿ ಅರೆಸ್ಟ್

ಮಂಗಳೂರು: ಉಳಾಯಿಬೆಟ್ಟು ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಕೇರಳ ಮೂಲದ ನಟೋರಿಯಸ್ ದರೋಡೆಕೋರರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.

ನೀರುಮಾರ್ಗ ಗ್ರಾಮ ಪಂಚಾಯತಿ ಸದಸ್ಯ ವಸಂತ ಕುಮಾರ್(42), ರಮೇಶ ಪೂಜಾರಿ(42), ರೇಮಂಡ್ ಡಿಸೋಜ(47), ಬಾಲಕೃಷ್ಣ ಶೆಟ್ಟಿ(48), ಜಾಕಿ‌ರ್(56), ವಿನೋಜ್(38), ಸಜೀಶ್ (32), ಸತೀಶ್ ಬಾಬು(44), ಶಿಜೋ ದೇವಸ್ಸಿ(38), ಬಿಜು(41) ಬಂಧಿತ ಆರೋಪಿಗಳು. ವಸಂತ ಪೂಜಾರಿ ತನ್ನ ಪರಿಚಿತ ರೇಮಂಡ್ ಡಿಸೋಜನ ಬಳಿ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ಕೋಟಿಗಟ್ಟಲೆ ಹಣವಿದೆಯೆಂದು ಹೇಳಿದ್ದು ಆತ ದರೋಡೆಗೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಕಾಸರಗೋಡಿನ ಪೈವಳಿಕೆಯ ಬಾಲಕೃಷ್ಣ ಶೆಟ್ಟಿ ಮತ್ತು ಕೇರಳ ಮೂಲದ ಕೆಲ ಆರೋಪಿಗಳನ್ನು ಸಂಪರ್ಕಿಸಿ 300ಕೋಟಿ ಹಣವಿರುವುದಾಗಿ ಹೇಳಿ ತಂಡ ಕಟ್ಟಿ ಕಳೆದ 7ತಿಂಗಳಿನಿಂದ ದರೋಡೆಗೆ ಸ್ಕೆಚ್ ಹಾಕಲಾಗಿತ್ತು. ಮನೆಯ ಸಂಪೂರ್ಣ ಸ್ಕೆಚ್, ಮನೆಯಲ್ಲಿ ಯಾರೆಲ್ಲಾ ಇದ್ದಾರೆಂಬ ಮಾಹಿತಿಯನ್ನು ವಸಂತ ಪೂಜಾರಿ ನೀಡಿದ್ದು ಜೂನ್ 21ರಂದು ಸಂಜೆ ಪ್ಲಾನ್‌ ನಂತೆ ದರೋಡೆಕೋರರ ತಂಡ ಕೋಟ್ಯಾನ್‌ ಮನೆಗೆ ನುಗ್ಗಿ ಕೃತ್ಯ ಎಸಗಿತ್ತು. ಕೃತ್ಯದ ಕುರಿತು ಯಾವುದೇ ಸುಳಿವು ಇರದ ಕಾರಣ ಪೊಲೀಸರಿಗೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ತನಿಖೆ ವೇಳೆ ಪದ್ಮನಾಭ ಕೋಟ್ಯಾನ್ ಅವರ ಲಾರಿ ಚಾಲಕ ವಸಂತ ಪೂಜಾರಿ ಮೇಲೆ ಶಂಕೆ ವ್ಯಕ್ತವಾಗಿತ್ತು. ಆರಂಭದಲ್ಲಿ ಬಂಟ್ವಾಳ ಮೂಲಕ ದರೋಡೆಕೋರರ ಕಾರು ತೆರಳಿರುವ ಸುಳಿವು ದೊರಕಿದ್ದು, ತಲಪಾಡಿ ಮೂಲಕ ಆರೋಪಿಗಳು ಪರಾರಿಯಾಗಿದ್ದು ತಿಳಿದುಬಂದಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಯಶಸ್ವಿಯಾಗಿದ್ದು ಇದೀಗ  10 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ನಾಲ್ವರು ಆರೋಪಿಗಳು ಸೇರಿದಂತೆ ಎಲ್ಲಾ 10 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

LEAVE A REPLY

Please enter your comment!
Please enter your name here