ಮಂಗಳೂರು/ಮಸ್ಕತ್: ಜು.15ರಂದು ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ ಪ್ರಕರಣದಲ್ಲಿ 13 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ದೇಶದ ಸಾಗರ ಭದ್ರತಾ ಕೇಂದ್ರ ಪ್ರಕಟಿಸಿದೆ.
117 ಮೀಟರ್ ಉದ್ದದ 2007ರಲ್ಲಿ ನಿರ್ಮಾಣಗೊಂಡ ತೈಲ ಟ್ಯಾಂಕರ್ “ಪ್ರೆಸ್ಟೀಜ್ ಫಾಲ್ಕನ್” ಹೆಸರಿನ ಹಡಗಿನಲ್ಲಿ 13 ಮಂದಿ ಭಾರತೀಯರು ಮತ್ತು ಮೂವರು ಶ್ರೀಲಂಕನರು ಇದ್ದರು ಎಂದು ಒಮಾನಿ ಕೇಂದ್ರ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ. ಹಡಗು ಮಗುಚಿದ ಸ್ಥಿತಿಯಲ್ಲೇ ಇನ್ನೂ ಮುಳುಗಿಕೊಂಡಿದೆ ಎಂದು ಸಾಗರ ಭದ್ರತಾ ಕೇಂದ್ರ ಹೇಳಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ. ಹಡಗಿನಿಂದ ತೈಲ ಉತ್ಪನ್ನಗಳು ಸೋರಿಕೆಯಾಗುತ್ತಿರುವ ಬಗ್ಗೆ ಯಾವುದೇ ಮಾಹಿತಿ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಶಿಪ್ಪಿಂಗ್ ವೆಬ್ ಸೈಟ್ ಮೆರಿಟ್ರಾಫಿಕ್.ಕಾಮ್ ಪ್ರಕಾರ, ದುಬೈನ ಹಮ್ರಿಯಾದಿಂದ ಹೊರಟ ಈ ಹಡಗು ಯೆಮನ್ ನ ಅಡೇನ್ ಬಂದರು ನಗರಕ್ಕೆ ಪ್ರಯಾಣಿಸುತ್ತಿತ್ತು.